ಚೀನಾ ಗಡಿಯಲ್ಲಿ ಭಾರತ ಶಾಂತಿ ಬಯಸಿದೆ: ರಾಜನಾಥ್ ಸಿಂಗ್

Update: 2020-10-25 06:51 GMT

ಸದಿಲ್ಲಿ: ಭಾರತವು ಚೀನಾದ ಗಡಿಭಾಗದಲ್ಲಿ ಶಾಂತಿ ಬಯಸಿದೆ ಎಂದು ರಕ್ಷಣಾ ಸಚಿವ   ಸಿಂಗ್ ರವಿವಾರ ಹೇಳಿದ್ದಾರೆ.

 ಡಾರ್ಜಿಲಿಂಗ್‌ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕದಲ್ಲಿ ಶಸ್ತ್ರಾಸ್ತ್ರಗಳ ಪೂಜೆ ಮಾಡಿದ ನಂತರ ಅವರು ಈ ಹೇಳಿಕೆ ನೀಡಿದರು.

ರಕ್ಷಣಾ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಕುಮಾರ್ ಮುಕುಂದರ್ ನರವಾನೆ, ಇತರ ಅಧಿಕಾರಿಗಳು, ಯೋಧರು ಇದ್ದರು.

"ಭಾರತದ ಧೈರ್ಯಶಾಲಿ ಸೈನಿಕರು ದೇಶದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂಡೋ-ಚೀನಾ ಗಡಿ ಉದ್ವಿಗ್ನತೆ ಕೊನೆಗೊಳ್ಳಬೇಕು ಎಂದು ನಾವು ಬಯಸುತ್ತೇವೆ ಹಾಗೂ ಶಾಂತಿಯನ್ನು ಕಾಪಾಡಬೇಕು ಎಂದು ನಾವು ಬಯಸುತ್ತೇವೆ. ಆದರೆ, ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ನಮ್ಮ ಸೈನಿಕರು ಯಾರಿಗೂ ಒಂದಿಂಚು ಭೂಮಿಯನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ..ಇತಿಹಾಸವು ಭಾರತೀಯ ಸೈನಿಕರ ಧೈರ್ಯವನ್ನು ನೆನಪಿಸುತ್ತದೆ''ಎಂದು ಆಯುಧ ಪೂಜೆಯ ಬಳಿಕ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News