ಅವಹೇಳನಕಾರಿ ಹೇಳಿಕೆ: ಸಾಮಾಜಿಕ ಕಾರ್ಯಕರ್ತೆಯ ಕ್ಷಮೆಯಾಚಿಸುವಂತೆ 'ಟೈಮ್ಸ್ ನೌ'ಗೆ ಎನ್‌ಬಿಎಸ್‌ಎ ಸೂಚನೆ

Update: 2020-10-25 08:13 GMT

ಹೊಸದಿಲ್ಲಿ: 2018ರಲ್ಲಿ ಚರ್ಚಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಸಂಜುಕ್ತಾ ಬಸು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಟೈಮ್ಸ್ ನೌ ಸುದ್ದಿವಾಹಿನಿ ಕ್ಷಮೆಯಾಚಿಸಬೇಕೆಂದು ಸುದ್ದಿಪ್ರಸಾರ ಮಾನದಂಡ ಪ್ರಾಧಿಕಾರ(ಎನ್‌ಬಿಎಸ್‌ಎ)ನಿರ್ದೇಶಿಸಿದೆ. ಅಕ್ಟೋಬರ್ 27ರಂದು ರಾತ್ರಿ 9 ಗಂಟೆಗೆ ಕ್ಷಮೆಯಾಚನೆಯನ್ನು ಪ್ರಸಾರ ಮಾಡಬೇಕೆಂದು ಟೈಮ್ಸ್ ನೌ ಚಾನೆಲ್‌ಗೆ ಪ್ರಾಧಿಕಾರ ಆದೇಶಿಸಿದೆ.

ಎಪ್ರಿಲ್ 6,2018ರಲ್ಲಿ ಟೈಮ್ಸ್ ನೌ ಚಾನೆಲ್ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯ ಬಗ್ಗೆ ಮಾನಹಾನಿಕರ ಕಾರ್ಯಕ್ರಮವನ್ನು ನಡೆಸಿದೆ ಎಂದು ಪ್ರಾಧಿಕಾರ ಹೇಳಿದೆ. ಚಾನೆಲ್ ತನ್ನ ಕಾರ್ಯಕ್ರಮದಲ್ಲಿ ಬಸು ಅವರನ್ನು 'ಹಿಂದೂ ವಿರೋಧಿ', 'ಕೆಟ್ಟ ಟ್ರೋಲ್' ಎಂದು ಉಲ್ಲೇಖಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬೆಂಬಲ ನೀಡುವ ಬಸು ಅವರು ರಾಹುಲ್ ಅವರ 'ಟ್ರೋಲ್ ಆರ್ಮಿ' ಎಂದು ಹೇಳಿಕೊಂಡಿದೆ. ಆಕೆಯ ಹೇಳಿಕೆಯನ್ನು ಪಡೆಯಲು ಚಾನೆಲ್ ಅವರನ್ನು ಸಂಪರ್ಕಿಸಿಲ್ಲ. ಪ್ರಸಾರ ಮಾಡುವ ವಿಚಾರವನ್ನು ಪರಿಶೀಲಿಸಲಿಲ್ಲ. ಆ ಮೂಲಕ ಸಂಸ್ಥೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಪ್ರಾಧಿಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News