ಜೋಕಟ್ಟೆ: ಜ್ಯೂನಿಯರ್ ಫ್ರೆಂಡ್ಸ್ ನಿಂದ ಕ್ರೀಡಾಕೂಟ

Update: 2020-10-26 04:24 GMT

ಜೋಕಟ್ಟೆ, ಅ.26: ಇಲ್ಲಿನ ಜ್ಯೂನಿಯರ್ ಫ್ರೆಂಡ್ಸ್ ವತಿಯಿಂದ ಜೋಕಟ್ಟೆ ಶಾಲಾ ಮೈದಾನದಲ್ಲಿ ಮಕ್ಕಳಿಗೆ ಕ್ರೀಡಾಕೂಟವು ಇತ್ತೀಚಿಗೆ ನಡೆಯಿತು.

ಅಮೀನ್ ಜೋಕಟ್ಟೆ ಮತ್ತು ನೌಫಲ್ ಜೋಕಟ್ಟೆ ನೇತೃತ್ವದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಸುಮಾರು ನೂರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಹಗ್ಗ ಜಗ್ಗಾಟ, ಬಾಸ್ಕೆಟ್ ಬಾಲ್, ಸೈಕಲ್ ಬ್ಯಾಲನ್ಸ್ ಹಾಗೂ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಫೀಕ್ ಜೋಕಟ್ಟೆ, ಝುಬೈರ್ ಜೋಕಟ್ಟೆ, ಝಿಯಾದ್, ಮುಶೀರ್, ತೌಸೀಫ್, ಸಿದ್ದೀಕ್ , ಮುಸ್ತಫ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News