ದಸರಾದಲ್ಲಿ ಪ್ರಧಾನಿ, ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹಿಸಿದ ಪಂಜಾಬ್, ಹರ್ಯಾಣ ರೈತ ಸಂಘಟನೆಗಳು

Update: 2020-10-26 07:40 GMT
Photo: indianexpress.com

 ಲುಧಿಯಾನ: ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರು, ಕಾರ್ಪೊರೇಟ್ ಕಂಪೆನಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪ್ರತಿಕೃತಿಗಳನ್ನು ದಹಿಸುವ ಮೂಲಕ ಪಂಜಾಬ್ ಹಾಗೂ ಹರ್ಯಾಣ ರೈತರುಗಳು ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.

ರೈತರು, ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು, ಕಾರ್ಮಿಕರು, ಕಲಾವಿದರು ಹಾಗೂ ಬರಹಗಾರರು ಸೇರಿದಂತೆ ಭಾರತೀಯ ಕಿಸಾನ್ ಯೂನಿಯನ್(ಏಕ್ತಾ ಉಗ್ರಹಾನ್)ಕಾರ್ಯಕರ್ತರು ರಾಜ್ಯದ ಮಾಲ್ವಾ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರತಿಕೃತಿಯನ್ನು ಸುಡುವ ಮೆರವಣಿಗೆಯಲ್ಲಿ ಭಾಗವಹಿಸಿದರು.

 "ಕೇಂದ್ರ ಸರಕಾರ ವಿರುದ್ಧ ಸಾಂಕೇತಿಕ ಪ್ರತಿಭಟನೆಯಾಗಿ ಮೋದಿ ಹಾಗೂ ಕಾರ್ಪೊರೇಟ್‌ಗಳ ಪ್ರತಿಕೃತಿಗಳನ್ನು ದಹಿಸಲಾಗಿದೆ. ರೈತರನ್ನು ಬೆಂಬಲಿಸಲು ಗ್ರಾಮೀಣ ಪ್ರದೇಶದ ಜನರು ಮಾತ್ರವಲ್ಲದೆ ನಗರ ಪ್ರದೇಶದ ಜನರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು'' ಎಂದು ಬಿಕೆಯು ಎಕ್ತಾ ಉಗ್ರಾಹನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಖದೇವ್ ಕೊಕ್ರಿ ಕಲಾನ್ ಹೇಳಿದ್ದಾರೆ.

"ರವಿವಾರದ ಪ್ರತಿಭಟನೆಯಲ್ಲಿ ವಿವಿಧ ಹಿನ್ನೆಲೆ ಹಾಗೂ ವೃತ್ತಿಗಳ ಜನರು ಭಾಗವಹಿಸುವುದರೊಂದಿಗೆ ಇಡೀ ಪಂಜಾಬಿ ಸಮಾಜವು ರೈತರೊಂದಿಗೆ ತಮ್ಮ ಹೋರಾಟದಲ್ಲಿ ಒಗ್ಗೂಡಿದೆ. ಕೇಂದ್ರ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಪಂಜಾಬ್ ಮಾತ್ರವಲ್ಲ ಹರ್ಯಾಣ ಹಾಗೂ ರಾಜಸ್ಥಾನದ ರೈತರೂ ಭಾಗವಹಿಸಿದ್ದರು. ಹಲವು ಗ್ರಾಮಗಳು, ಪಟ್ಟಣಗಳು ಹಾಗೂ ನಗರಗಳಲ್ಲಿ ಪ್ರಧಾನಿ ಮೋದಿ ಹಾಗೂ ಕಾರ್ಪೊರೇಟ್‌ಗಳ ಪ್ರತಿಕೃತಿ ಸುಟ್ಟುಹಾಕಲಾಗಿದೆ''ಎಂದು ಸುಖದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News