ಪುತ್ತೂರು: ಕ್ಲಬ್ ನಲ್ಲಿ ಜೂಜಾಟನಿರತ 15 ಆರೋಪಿಗಳ ಬಂಧನ

Update: 2020-10-26 10:32 GMT

ಪುತ್ತೂರು, ಅ.26: ಇಲ್ಲಿನ ಪ್ರತಿಷ್ಠಿತ ಕ್ಲಬ್ ವೊಂದಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ರವಿವಾರ ರಾತ್ರಿ ದಾಳಿ ನಡೆಸಿದ್ದು ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟದಲ್ಲಿ ನಿರತರಾಗಿದ್ದ 15 ಆರೋಪಿಗಳನ್ನು ಬಂಧಿಸಿದ್ದಾರೆ. 

ಪುತ್ತೂರು ನಗರದ ಮಾರ್ಕೆಟ್  ರಸ್ತೆ ಸಮೀಪದ  ಕ್ಲಬ್ ಗೆ ಪುತ್ತೂರು ಎಎಸ್ಪಿ ನಿರ್ದೇಶನದಂತೆ ಪುತ್ತೂರು ನಗರ ಠಾಣೆ ಇನ್ ಸ್ಪೆಕ್ಟರ್ ಗೋಪಾಲ ನಾಯ್ಕ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

 ಕ್ಲಬ್ ನಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಈ  ದಾಳಿ ನಡೆದಿದೆ.  ಜೊಜಾಟದಲ್ಲಿ ತೊಡಗಿಸಲಾದ ಸುಮಾರು 1.58 ಲಕ್ಷ ರೂ.ವನ್ನು ಪೊಲೀಸರು  ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News