ರಾಜ್ಯಮಟ್ಟದ ಮಕ್ಕಳ ಛಾಯಾಚಿತ್ರ ಸ್ಪರ್ಧೆ

Update: 2020-10-26 13:23 GMT

ಉಡುಪಿ, ಅ.26: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಮಕ್ಕಳ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಮೂರು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ. ಮಗುವಿನ ಫೋಟೋ 6x 9ಅಳತೆಯಲ್ಲಿ ಇರಬೇಕು. ಹಳೆಯ ಫೋಟೋ ಹಾಗು ಮೊಬೈಲ್ನಿಂದ ತೆಗೆದ ಫೋಟೋವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಫೋಟೋದ ಹಿಂದೆ ಮಗುವಿನ ಹೆಸರು, ವಿಳಾಸ ಜನ್ಮ ದಿನಾಂಕ ಮತ್ತು ದೂರವಾಣಿ ಸಂಖ್ಯೆ ನಮೂದಿಸಬೇಕು.

ಜನ್ಮ ದಿನಾಂಕದ ದಾಖಲೆಯ ನಕಲು ಪ್ರತಿ ಇರಬೇಕು. ಫೋಟೋ ಕಳುಹಿಸಲು ಕೊನೆಯ ನ.10. ಫಲಿತಾಂಶವನ್ನು ನ.14ರಂದು ಪ್ರಕಟಿಸಲಾಗುವುದು. ಛಾಯಾಚಿತ್ರವನ್ನು ಅಂಚೆ ಮೂಲಕವೇ ತಲುಪಿಸಬೇಕು.

ಫೋಟೋ ಕಳುಹಿಸಬೇಕಾದ ವಿಳಾಸ- ಶ್ಯಾಡೋ ಡಿಜಿಟಲ್ ಕ್ರಿಯೇಶನ್, ಕಸ್ತೂರಿ ಬಿಲ್ಡಿಂಗ್ ಎರಡನೇ ಮಹಡಿ, ಶಿರಿಬೀಡು, ಉಡುಪಿ. ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಹಾಗು ಕಾರ್ಯದರ್ಶಿ ಸುಕೇಶ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News