ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ದಸರಾ ಉತ್ಸವ, ಸಮಾರೋಪಕ್ಕೆ ಚಾಲನೆ

Update: 2020-10-26 15:41 GMT

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿ ಕೋವಿಡ್ -19 ಹಿನ್ನೆಲೆಯಲ್ಲಿ ಸುಮಾರು 300 ಜನರಿಗೆ ಮಿತಿ ಗೊಳಿಸ ಬೇಕು ಎನ್ನುವ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಮಹೋತ್ಸವದ ಸಮಾಪನವನ್ನು ಕುದ್ರೋಳಿ ದೇವಸ್ಥಾನದ ವಠಾರಕ್ಕೆ ಸೀಮಿತಗೊಳಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆಯನ್ನು ಸೋಮವಾರ ಸಂಜೆ 5.45 ಕ್ಕೆ ಶ್ರೀ ಕ್ಷೇತ್ರ ಕುದ್ರೋಳಿಯಿಂದ ಆರಂಭ ಗೊಂಡು ನಗರದಲ್ಲಿ ಎಂದಿನಂತೆ ದಸರಾ ಮೆರವಣಿಗೆಯ ಸಾಗುವ ದಾರಿಯಲ್ಲಿ ಸಾಗಿ ಮರಳಿ ಕುದೋಳಿಗೆ ಆಗಮಿಸಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾಗಣಪತಿ, ಆದಿಶಕ್ತಿ,ನವದುರ್ಗೆಯರ ವಿಗ್ರಹಗಳು ಹಾಗೂ ಶಾರದಾ ದೇವಿಯ ವಿಗ್ರಹಗಳ ಮೆರವಣಿಗೆಯನ್ನು ಧಾರ್ಮಿಕ ವಿಧಿಗಳೊಂಂದಿಗೆ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನಡೆಸಿ ಜಲಸ್ತಂಭನಗೊಳಿಸುವ ಧಾರ್ಮಿಕ ಕಾರ್ಯಗಳಿಗೆ ರಾತ್ರಿ 7 ಗಂಟೆಯಿಂದ ನವದುರ್ಗೆಯರು, ಶಾರದಾ ಪೂಜೆಯೊಂದಿಗೆ ಆರಂಭಗೊಂಡಿತು.ದೇವಸ್ಥಾನದ ಆವರಣದಲ್ಲಿ ಎಂದಿನಂತೆ ಹುಲಿವೇಷಧಾರಿಗಳ ಸುಮಾರು 14 ತಂಡಗಳು ತಮ್ಮ ಸಾಂಪ್ರಾದಾಯಿಕ ನರ್ತನದೊಂದಿಗೆ ಉತ್ಸವ ಪ್ರೋತ್ಸಾಹ ನೀಡಿದರು.

ಶಾರದಾ ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮ ರಾಜ್, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ದೇವೇಂದ್ರ ಪೂಜಾರಿ, ಡಾ. ಬಿ.ಜಿ. ಸುವರ್ಣ, ಹರಿಕೃಷ್ಣ ಬಂಟ್ವಾಳ್ , ಮಹೇಶ್ಚಂದ್ರ, ಪದ್ಮ ನಾಭ ಅಮೀನ್, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳಾದೇವಿಯಲ್ಲಿ ರಥೋತ್ಸವದೊಂದಿಗೆ ನವರಾತ್ರಿ ಸಮಾರೋಪ

 ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ ಒಂಭತ್ತು ದಿನಗಳ ಕಾಲ ನಡೆದ ನವರಾತ್ರಿ ಯ ವಾರ್ಷಿಕ ಉತ್ಸವ ಸೋಮವಾರ ರಾತ್ರಿ ರಥೋತ್ಸವದೊಂದಿಗೆ ದೇವಳದ ಆವರಣದಲ್ಲಿ ಬಲಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನವರಾತ್ರಿ ಉತ್ಸವ ಸಮಾರೋಪದ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News