ಕೆಟ್ಟು ನಿಂತ ಸ್ಕೂಟರ್ ಕಳವು

Update: 2020-10-26 15:57 GMT

ಉಡುಪಿ, ಅ.26: ರಿಪೇರಿಗೆ ಮೆಕ್ಯಾನಿಕ್ ಸಿಗದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವ ಘಟನೆ ಅ.21ರ ಮಧ್ಯಾಹ್ನದಿಂದ ಅ.23ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಉಡುಪಿ ಪಿಪಿಸಿ ಕಾಲೇಜು ಸಮೀಪ ನಡೆದಿದೆ.

ಮಣಿಪಾಲದ ಎನ್.ಪಿ.ಮುನಾವರ್ ಎಂಬವರ ಕೆಎ-20-ಇಬಿ-1597ನೆ ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ಮ್ಯಾಕೆನಿಕ್ ಸಿಗದೆ ನಿಲ್ಲಿಸಿದ್ದು, ಎರಡು ದಿನಗಳ ಬಳಿಕ ಬಂದು ನೋಡಿದಾಗ ವಾಹನ ಕಳವಾಗಿರುವುದು ತಿಳಿದು ಬಂತು. ಇದರ ಮೌಲ್ಯ 15000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News