ಮಾಸ್ಕ್ : 9,100 ರೂ. ದಂಡ ವಸೂಲಿ
Update: 2020-10-27 17:24 IST
ಉಡುಪಿ, ಅ. 26: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅ.26ರಂದು ಮಾಸ್ಕ್ ಧರಿಸದೆ ಓಡಾಡುತ್ತಿದ್ದ 91 ಮಂದಿಯಿಂದ ಒಟ್ಟು 9,100ರೂ. ದಂಡ ವಸೂಲಿ ಮಾಡಲಾಗಿದೆ.
ಜಿಲ್ಲೆಯ ಪೊಲೀಸ್ ಇಲಾಖೆ 82 ಮಂದಿಯಿಂದ 8,200ರೂ., ಅಬಕಾರಿ ಇಲಾಖೆ ಆರು ಮಂದಿಯಿಂದ 600ರೂ. ಹಾಗೂ ಕಂದಾಯ ಇಲಾಖೆ ಮೂವರಿಂದ 300ರೂ. ದಂಡ ವಸೂಲಿ ಮಾಡಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 14,57,350ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.