ಪ್ಯಾರಿಸ್‌ನಲ್ಲಿ ಅಧ್ಯಾಪಕನ ಶಿರಚ್ಛೇದ ಘಟನೆ: ಮುಸ್ಲಿಂ ಚಿಂತಕರು, ಸಾಮಾಜಿಕ ಹೋರಾಟಗಾರರಿಂದ ಖಂಡನೆ

Update: 2020-10-27 16:35 GMT
ಫೈಲ್ ಚಿತ್ರ

ಹೊಸದಿಲ್ಲಿ, ಅ. 27: ಮುಸ್ಲಿಂ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು ರವಿವಾರ ವೆಬಿನಾರ್‌ನಲ್ಲಿ ಮಾತನಾಡಿ, ಪ್ಯಾರಿಸ್ ನಲ್ಲಿ   ಅಬ್ದುಲ್ಲಾಖಾ  ಎಂಬಾತ ಅಧ್ಯಾಪಕ ಸ್ಯಾಮುವೆಲ್ ಪ್ಯಾಟಿ ಅವರ ಶಿರಚ್ಛೇದ ಮಾಡಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿದ್ದಾರೆ.

ಇಂಡಿಯನ್ ಮುಸ್ಲಿಂ ಫಾರ್ ಸೆಕ್ಯುಲರ್ ಡೆಮಾಕ್ರೆಸಿ (ಐಎಂಎಸ್‌ಡಿ) ರವಿವಾರ ಈ ವೆಬಿನಾರ್ ಆಯೋಜಿಸಿತ್ತು. ವೆಬಿನಾರ್ ನಿರ್ವಹಿಸಿದ ಸಂಘಟನೆಯ ಸಂಚಾಲಕ ಜಾವೇದ್ ಆನಂದ್, ಎಲ್ಲ ನಾಲ್ವರು ವಿಶ್ಲೇಷಕರು ಐಎಂಎಸ್‌ಡಿಯ ಪ್ರಮುಖ ಸದಸ್ಯರು ಹಾಗೂ ಪದಾಧಿಕಾರಿಗಳು. ಜಾವೇದ್ ಆನಂದ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಈ ಬರ್ಬರ ಕೃತ್ಯಕ್ಕೆ ಕಾರಣನಾದ ವ್ಯಕ್ತಿಯನ್ನು ಮಾತ್ರವಲ್ಲ, ಬದಲಾಗಿ ಈ ಕೃತ್ಯಕ್ಕೆ ಪ್ರಚೋದನೆ ನೀಡುವಲ್ಲಿ ಭಾಗಿಯಾದವರು ಹಾಗೂ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿರುವವರನ್ನು ಕೂಡ ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದಿದ್ದಾರೆ.

ನಾವು ಪ್ಯಾಟಿ ಅವರ ಹತ್ಯೆಯನ್ನು ಮಾತ್ರ ಖಂಡಿಸುತ್ತಿಲ್ಲ ಬದಲಾಗಿ ಜಗತ್ತಿನ ಎಲ್ಲೆಡೆ ನಡೆಯುತ್ತಿರುವ ಧರ್ಮ ನಿಂದನೆ ಹಾಗೂ ಧರ್ಮ ವಿರೋಧವನ್ನು ಬಹಿಷ್ಕರಿಸುವಂತೆ ಕೂಡ ಆಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದರು.

 ಮುಂಬೈ ಮೂಲದ ವಿದ್ವಾಂಸ ಡಾ. ಝೀನತ್ ಶೌಕತ್ ಅಲಿ ಮಾತನಾಡಿ, ಇಸ್ಲಾಂನಲ್ಲಿ ಧರ್ಮನಿಂದನೆಗೆ ಅಥವಾ ಧರ್ಮ ವಿರೋಧಿ ಜನರನ್ನು ಹತ್ಯೆಗೈಯಲು ಅವಕಾಶ ಇಲ್ಲ. ಕುರ್‌ಆನ್ ಅಂತಹ ಶಿಕ್ಷೆಯನ್ನು ಎಲ್ಲಿಯೂ ಹೇಳಿಲ್ಲ. ಅಹಿಂಸೆಯ ದಾರಿಯ ಮೂಲಕ ಶಾಂತಿ ಹಾಗೂ ನ್ಯಾಯ ಪಡೆಯುವುದನ್ನು ಕುರ್‌ಆನ್ ಹೇಳುತ್ತದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News