ಕೃಷ್ಣ ಮಠದಲ್ಲಿ ಒಂದು ತಿಂಗಳ ಪಶ್ಚಿಮ ಜಾಗರ ಪೂಜೆ ಪ್ರಾರಂಭ

Update: 2020-10-27 15:08 GMT

ಉಡುಪಿ, ಅ.27: ಶ್ರೀಕೃಷ್ಣ ಮಠದಲ್ಲಿ ಇಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಪಶ್ಚಿಮ ಜಾಗರ ಪೂಜೆಯನ್ನು ನೆರವೇರಿಸಿದರು. ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ಆಶ್ವಿಜ ಮಾಸದ ಶುಕ್ಲ ಏಕಾದಶಿಯಿಂದ ಒಂದು ತಿಂಗಳ ಕಾಲ ಈ ಪೂಜೆ ನಡೆಯಲಿದೆ.

ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ ಪ್ರತಿ ನಿತ್ಯ 14 ಪೂಜೆಗಳು ನಡೆಯುತಿದ್ದು, ಇದರೊಂದಿಗೆ ಪಶ್ಚಿಮ ಜಾಗರ ಪೂಜೆ 15ನೇಯದಾಗಿ ಒಂದು ತಿಂಗಳ ಕಾಲ ಪ್ರತಿನಿತ್ಯ ಉತ್ಥಾನ ದಾದ್ವಶಿಯವರೆಗೆ ನಡೆಯಲಿದೆ. ಈ ಪೂಜೆ ನಡೆಯುವ ಸಂದರ್ಭದಲ್ಲಿ ಕೃಷ್ಣ ಮಠದ ಗರ್ಭಗುಡಿಯ ಸುತ್ತ ದಳಿಗಳಲ್ಲಿ ಹಣತೆ ದೀಪಗಳನ್ನು ಬೆಳಗಲಾಗುತ್ತದೆ. ಅಲ್ಲದೇ ವಿಶೇಷವಾಗಿ ಸೂರ್ಯವಾದ್ಯವನ್ನು ಮೊಳಗಿಸಲಾಗುತ್ತದೆ. ಈ ಪೂಜೆಯಿಂದ ಆಷಾಢ ಶುದ್ಧ ಏಕಾದಶಿಯಿಂದ ಯೋಗನಿದ್ರೆಯಲ್ಲಿರುವ ಭಗವಂತ ಎಚ್ಚರಗೊಳ್ಳುತ್ತಾನೆಂಬುದು ಪ್ರತೀತಿ.

ಪರ್ಯಾಯ ಮಠಾಧೀಶರು ಕೃಷ್ಣನಿಗೆ ಪ್ರತಿನಿತ್ಯ 14 ಪೂಜೆಗಳನ್ನು ನೆರವೇರಿ ಸುತ್ತಾರೆ. ಅದರೊಂದಿಗೆ ಒಂದು ತಿಂಗಳು ಪಶ್ಚಿಮ ಜಾಗರ ಪೂಜೆಯೂ ಸೇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News