ಕುಂದಾಪುರ: ಪಂಪನ ಆದಿಪುರಾಣ ಕುರಿತು ವಿಶೇಷ ಉಪನ್ಯಾಸ

Update: 2020-10-27 15:11 GMT

ಕುಂದಾಪುರ, ಅ.27: ಪಂಪನ ಆದಿಪುರಾಣ ಧಾರ್ಮಿಕ ಕಾವ್ಯವಾದರೂ ಕೂಡಾ ಪುರಾಣ ಚೌಕಟ್ಟಿನ ಒಳಗೆ ಜೀವನ ಧರ್ಮವನ್ನು ನಿರೂಪಿ ಸುತ್ತದೆ ಎಂದು ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಸಂಪತ್‌ ಕುಮಾರ್ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಂಗ ಸಂಸ್ಥೆಯಾದ ಸ್ಥಳೀಯ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ವಿಭಾಗಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಪಂಪನ ಆದಿಪುರಾಮದಲ್ಲಿ ಜೀವನದೃಷ್ಟಿ’ ಎಂಬ ವಿಷಯದ ಕುರಿತು ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪಂಪನ ಆದಿ ಪುರಾಣದಲ್ಲಿ ಬರುವ ನೀಲಾಂಜನೆಯ ನೃತ್ಯ, ಭರತ- ಬಾಹುಬಲಿಯರ ಚಿತ್ರಣದ ಉದಾಹರಣೆ ಕೊಟ್ಟು, ಐಹಿಕ ಸುಖಭೋಗದಲ್ಲಿ ತಲ್ಲೀರಾದ ಮಹಾಬಳನು ಬೇರೆ ಬೇರೆ ಜನ್ಮವೆತ್ತಿ, ವೃಷಭದೇವನಾಗಿ ಜನಿಸಿ ನೀಲಾಂಜನೆಯ ನೃತ್ಯದ ಸನ್ನಿವೇಶದ ಮೂಲಕ ಜೀವನದ ಕ್ಷಣ ಬಂಗುರತೆ ಹೊಂದಿದ ಬಗೆಯನ್ನು ಅವರು ವಿಶ್ಲೇಷಿಸಿದರು.

ಕಾಲೇಜಿನ ಪ್ರಾಂಶುಪಾಲ್ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ವಿ. ಬನ್ನಾಡಿ ಸ್ವಾಗತಿಸಿದರು. ಸಹ ಸಂಯೋಜಕ ಪ್ರೊ. ಶಶಿಕಾಂತ್ ಹತ್ವಾರ್ ನ್ಯಾಕ್ ಉಪಸ್ಥಿತ ರಿದ್ದರು. ಕನ್ನಡ ಭಾಷಾ ವಿಭಾಗದ ಪ್ರೊ. ಪಿ.ಗಣಪತಿ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News