ಉಡುಪಿ: ಇಬ್ಬರು ಕಲಾವಿದರಿಗೆ ಸರ್ಪಂಗಳ ಪ್ರಶಸ್ತಿ ಪ್ರದಾನ

Update: 2020-10-27 15:13 GMT

ಉಡುಪಿ, ಅ.27: ಶ್ರೀಕೃಷ್ಣಮಠ ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆ ಯಲ್ಲಿ ಸಾಂಸ್ಕೃಕಿಕ ಕಾರ್ಯಕ್ರಮದಂಗವಾಗಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆದಿರುವ ಸರ್ಪಂಗಳ ಯಕ್ಷೋತ್ಸವದ ಸಂದರ್ಭ ದಲ್ಲಿ ಇಂದು ಇಬ್ಬರು ಕಲಾವಿದರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಟೀಲು ಮೇಳದ ಮುಖ್ಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಧರ್ಮಸ್ಥಳ ಮೇಳದ ಟೆಂಟ್ ಮೇಸ್ತ್ರಿ ಬೆಳಾಲು ಸಂಜೀವ ಪೂಜಾರಿ ಅವರಿಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಪ್ರಶಸ್ತಿಯನ್ನು ವಿತರಿಸಿ ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ನಳಿನಿ ಎಸ್.ಭಟ್, ಡಾ.ನರೇಂದ್ರ ಶೆಣೈ, ಡಾ.ಶೈಲಜಾ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸರ್ಪಂಗಳ ಯಕ್ಷೋತ್ಸವದಲ್ಲಿ ಅತಿಥಿ ಕಲಾವಿದರಿಂದ ‘ಕಾಯಕಲ್ಪ’ ಎಂಬ ತೆಂಕುತಿಟ್ಟು ಯಕ್ಷಗಾನದ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News