ಅ. 28 : ಅರಿಯಡ್ಕದ ಐತಿಹಾಸಿಕ ನವೀಕೃತ ಮಸೀದಿ ಉದ್ಘಾಟನೆ

Update: 2020-10-27 15:42 GMT

ಪುತ್ತೂರು : ಹಲವು ದಶಕಗಳ ಇತಿಹಾಸವಿರುವ ಪುತ್ತೂರು ತಾಲೂಕಿನ ಅರಿಯಡ್ಕದ ನವೀಕೃತ ಜುಮಾ ಮಸೀದಿಯನ್ನು ಅ.28ರಂದು ಪುತ್ತೂರು ಜುಮಾ ಮಸೀದಿ ಮುದರ್ರಿಸ್ ಅಸೈಯದ್ ಅಹ್ಮದ್ ಪೂಕೋಯ ತಂಙಲ್ ಉದ್ಘಾಟಿಸಲಿದ್ದಾರೆ.

ಉಡುಪಿ-ಚಿಕ್ಕಮಗಳೂರು-ಹಾಸನ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್(ಮಾಣಿ ಉಸ್ತಾದ್) ವಕ್ಫ್ ನಿರ್ವಹಣೆಯ ಕಾರ್ಯವನ್ನು ನಡೆಸಿಕೊಡಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಸಅದಿಯಾ ಅರೇಬಿಕ್ ಕಾಲೇಜ್ ಪ್ರೊಫೆಸರ್ ಹುಸೈನ್ ಸಅದಿ ಕೆ.ಸಿ.ರೋಡ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ ಸ್ಥಳೀಯ ಖತೀಬ್ ಅಬ್ದುಲ್ ಜಲೀಲ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 

ಸಮಾರಂಭದಲ್ಲಿ ದಾರುಲ್ ಅಶ್‍ಅರಿಯ್ಯ ಶರೀಅತ್ ಕಾಲೇಜ್ ಸುರಿಬೈಲು ಮುದರ್ರಿಸ್ ಮಹ್ಮೂದುಲ್ ಫೈಝಿ ಓಲೆಮೊಂಡವು, ಈ ಹಿಂದೆ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದ ಉಮ್ಮರ್ ಮುಸ್ಲಿಯಾರ್ ನಂಜೆ, ಉಮರ್ ಸಅದಿ ಬೈರಿಕಟ್ಟೆ, ಇಸ್ಮಾಯೀಲ್ ಅಹ್ಸನಿ ಸುಳ್ಯ, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಇಸ್ಮಾಯಿಲ್ ಅಶ್ರಫಿ ಎಣ್ಮೂರು, ಅಯ್ಯೂಬ್ ಇಂದಾದಿ, ಅಶ್ರಫ್ ಸಅದಿ ಬಿಳಿಯೂರು, ಶರೀಫ್ ಮಿಸ್ಬಾಹಿ ಕಾರ್ಕಾಳ, ಸ್ಥಳೀಯ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಬಾಹ್ಸನಿ, ಅಬೂಬಕರ್ ಮುಸ್ಲಿಯಾರ್, ಉಮರಾ ನೇತರರಾದ ಅಬ್ಬಾಸ್ ಹಾಜಿ ಮಣ್ಣಾಪು, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯಾ, ಉಸ್ಮಾನ್ ಹಾಜಿ ಚೆನ್ನಾರ್, ಸಿದ್ದೀಕ್ ಹಾಜಿ ಕುಂಬ್ರ, ಶರೀಫ್ ಎಂಜಿನಿಯರ್, ಹಮೀದ್ ಎಂಜಿನಿಯರ್ ಮಾವಂಜಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ಅರಿಯಡ್ಕ ಹಾಗೂ ಉಪಾಧ್ಯಕ್ಷ ಎ.ಆರ್.ಇಬ್ರಾಹೀಂ ಅರಿಯಡ್ಕ ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News