ವಾರ್ನರ್, ಸಾಹಾ ಭರ್ಜರಿ ಬ್ಯಾಟಿಂಗ್: ಡೆಲ್ಲಿ ಗೆಲುವಿಗೆ ಕಠಿಣ ಸವಾಲು ನೀಡಿದ ಹೈದರಬಾದ್
Update: 2020-10-27 21:25 IST
ದುಬೈ: ಭರ್ಜರಿ ಬ್ಯಾಟಿಂಗ್ ನಡೆಸಿದ ಹೈದರಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ್ದು, ಡೆಲ್ಲಿ ಗೆಲುವಿಗೆ 220 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 219 ರನ್ ಗಳನ್ನು ಗಳಿಸಿತು. ನಾಯಕ ಡೇವಿಡ್ ವಾರ್ನರ್ 34 ಎಸೆತಗಳಲ್ಲಿ 66 ರನ್ ಗಳಿಸಿದರೆ, ವೃದ್ಧಿಮಾನ್ ಸಾಹಾ 45 ಎಸೆತಗಳಲ್ಲಿ 87 ರನ್ ಗಳಿಸಿದರು.
ಡೆಲ್ಲಿ ಪರ ನೋರ್ಟ್ಜೆ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.