ಕಾರ್ಕಳ ಪುರಸಭೆ : ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆಯಾಗಿ ಪಲ್ಲವಿ

Update: 2020-10-27 17:13 GMT

ಕಾರ್ಕಳ, ಅ.27: ಕಾರ್ಕಳ ಪುರಸಭೆ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಸುಮಾಕೇಶವ್ ಹಾಗೂ ಉಪಾಧ್ಯಕ್ಷೆಯಾಗಿ ಪಲ್ಲವಿ ಆಯ್ಕೆಗೊಂಡರು. 

ಮಂಗಳವಾರ ಪುರಸಭೆಯಲ್ಲಿ ಚುನಾವಣೆ ನಡೆದಾಗ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಹುದ್ದೆಗೆ ಬಿಜೆಪಿಯ ಸುಮಾಕೇಶವ್, ಕಾಂಗ್ರೆಸ್‌ನಿಂದ ನಳಿನಿ ವಿಜೇಂದ್ರ ಆಚಾರ್ಯ ನಾಮಪತ್ರ ಸಲ್ಲಿಸಿದ್ದರು. ಹಿಂದುಳಿದ ವರ್ಗ ಎ ಮಹಿಳೆ ಮೀಸಲಾದ ಉಪಾಧ್ಯಕ್ಷತೆಗೆ ಬಿಜೆಪಿಯಿಂದ ಪಲ್ಲವಿ ಮತ್ತು ಕಾಂಗ್ರೆಸ್‌ನಿಂದ ಪ್ರಭಾಕಿಶೋರು ನಾಮಪತ್ರ ಸಲ್ಲಿಸಿದ್ದರು.

ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಬಿಜೆಪಿಯ ಸುಮಾಕೇಶವ್ ಮತ್ತು ಪಲ್ಲವಿ ತಲಾ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ,   ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ತಲಾ 11 ಮತಗಳನ್ನು ಪಡೆದು ಪರಾಭವಗೊಂಡರು. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 11 ಸದಸ್ಯರ ಸಂಖ್ಯೆ ಬಲ ಹೊಂದಿತ್ತು. ಸಂಸದೆ ಮತ್ತು ಶಾಸಕರ ಮತಗಳು ಬಿಜೆಪಿಗೆ ದೊರಕಿತ್ತು. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಯಿತು. ಓರ್ವ ಪಕ್ಷೇತರ ಅಭ್ಯರ್ಥಿ ಮತದಾನದಲ್ಲಿ ಭಾಗಹಿಸದೆ ಹೊರಗುಳಿದರು. ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ ಚುನಾವಣೆ ಅಧಿಕಾರಿಯಾಗಿ ದ್ದರು. ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಸಹಕರಿಸಿದರು. ಸಂಸದೆ, ಶೋಭಾ ಕರಂದ್ಲಾಜೆ, ಶಾಸಕ ವಿ.ಸುನೀಲ್‌ಕುಮಾರ್, ಆಡಳಿತ ಪಕ್ಷದ ಸದಸ್ಯರು, ವಿಪಕ್ಷ ಸದಸ್ಯರು, ಪುರಸಭೆ ಅಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಮಾಕೇಶವ್ ಪ್ರತಿಕ್ರಿಯಿಸಿ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯವಾಗಿ ಒಳಚರಂಡಿ ಸಹಿತ  ಹಲವು ಸಮಸ್ಯೆ ಗಳಿವೆ. ಇವುಗಳ ಪರಿಹಾರ ಜೊತೆಗೆ ಸ್ವಚ್ಚತೆ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡಲಾಗುವುದು. ಎಲ್ಲರ ವಿಶ್ವಾಸ ಪಡೆದು ಉತ್ತಮ ಆಡಳಿತ ನೀಡಲಾಗುವುದು ಎಂದರು. ಉಪಾಧ್ಯಕ್ಷೆ ಪಲ್ಲವಿ ಉಪಸ್ಥಿತರಿದ್ದರು. ಸಂಸದೆ, ಶಾಸಕರು ಪೂರ್ಣ ಸಹಕಾರದ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News