ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲಕನ ಕೊಲೆ ಯತ್ನ

Update: 2020-10-28 15:11 GMT

ಬಂಟ್ವಾಳ, ಅ.28: ಸ್ಟುಡಿಯೊ ಒಂದರ ಮಾಲಕನಿಗೆ ತಂಡವೊಂದು ಮಾರಕ ಆಯುಧದಿಂದ ದಾಳಿ ನಡೆಸಿ ಕೊಲೆಗೆ ಯತ್ನ ನಡೆಸಿ ಪರಾರಿಯಾಗಿರುವ ಘಟನೆ ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ವೇಳೆಗೆ ನಡೆದಿದೆ.

ಫರಂಗಿಪೇಟೆಯಲ್ಲಿರುವ ತೃಶಾ ಸ್ಟುಡಿಯೋ ಮಾಲಕ ದಿನೇಶ್ ದಾಳಿಗೆ ಒಳಗಾದವರು. ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರು ಖಾಸಗಿ ಅಸ್ಪತ್ರೆಗೆ ಸಾಗಿಸಲಾಗಿದೆ.

ದಿನೇಶ್ ಅವರು ಸ್ಟುಡಿಯೋ ಒಳಗೆ ಇದ್ದ ವೇಳೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News