ಉತ್ತರ ಕನ್ನಡ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ

Update: 2020-10-28 16:40 GMT

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಪ್ರವಾದಿ ಮುಹಮ್ಮದ್ ಪೈಗಂಬರ ಜನ್ಮದಿನಾಚರಣೆಯ ಅಂಗವಾಗಿ ಅ.23  ರಿಂದ ನ.5ರ ವರೆಗೆ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಅ.31 ಅಂತಿಮ ಎಂದು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ದಸರಾ ರಜೆ ಬಂದಿರುವದರಿಂದಾಗಿ ಪ್ರಬಂಧವನ್ನು ನ.5 ರ ಒಳಗೆ ಕಳುಹಿಸಿಕೊಡುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಬಂಧವು ಕೈ ಬರಹದಲ್ಲಿದ್ದು  ಎ4 ಅಳತೆಯ 6ಪುಟಕ್ಕೆ ಮೀರದಂತಿರಬೇಕು. ಕನ್ನಡದಲ್ಲಿ ಬರೆದ ಪ್ರಬಂಧ ಬರಹವನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಆಸಕ್ತರು ತಮ್ಮ ಪಿಪಿ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ, ಈಮೇಲ್ ವಿಳಾಸದೊಂದಿಗೆ,  ನ.5 ರ ಒಳಗೆ ತಲುಪುವಂತೆ  ‘ಸಂಚಾಲಕರು ಸೀರತ್ ಪ್ರಬಂಧ ಸ್ಪರ್ಧೆ, 321ದಾವತ್ ಸೆಂಟರ್ ಸುಲ್ತಾನ್ ಸ್ಟ್ರೀಟ್ ಭಟ್ಕಳಕ್ಕೆ  ಕಳುಹಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸು, ಉದ್ಯೋಗದ ಮಿತಿಇರುವುದಿಲ್ಲ.  ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ವ್ಯಾಪರಸ್ಥರು,ಸಾರ್ವಜನಿಕ ಸ್ತ್ರೀ ಮತ್ತು ಪುರುಷರು ಭಾಗಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 5000, ದ್ವತೀಯ 3000, ತೃತೀಯ 2000 ಹಾಗೂ ತಲಾ ಒಂದು ಸಾವಿರ ರೂಪಾಯಿಯ 3 ಸಮಧಾನಕರ ಬಹುಮಾನಗಳಿದ್ದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9886455416(ಎಂ.ಆರ್.ಮಾನ್ವಿ) ಗೆ ಕರೆ ಮಾಡಿ ಪಡೆದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News