ಮಂಗಳೂರು: ಮಾಸ್ಟರ್ ಕ್ಲಾಸ್‌ನಿಂದ 'ಚೆಫ್ ಆಫ್ ದಿ ಇಯರ್ 2020'

Update: 2020-10-29 12:09 GMT

ಮಂಗಳೂರು, ಅ. 29: ನಗರದ ಮಾಸ್ಟರ್ ಕ್ಲಾಸ್ (ಎಂಸಿ) ವತಿಯಿಂದ 'ಚೆಫ್ ಆಫ್ ದಿ ಇಯರ್ 2020' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರಥಮ ಅಡುಗೆಗೆ ಸಂಬಂಧಿಸಿದ ರಿಯಾಲಿಟಿ ಶೋ ಇದಾಗಿದ್ದು, ಮಂಗಳೂರು ಮತ್ತು ಸುತ್ತಮುತ್ತಲಿನ ಪಾಕಶಾಲೆಯ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಮಾಸ್ಟರ್ ಕ್ಲಾಸ್‌ನ ಸಿಇಒ ರಾಮನಾಥ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಮಾಸ್ಟರ್ ಕ್ಲಾಸ್ ಚೆಫ್ ಆಫ್ ದಿ ಇಯರ್ 2020 ರಿಯಾಲಿಟಿ ಶೋ ನಮ್ಮ ಟಿವಿ ಚಾನೆಲ್‌ನಲ್ಲಿ ಡಿಸೆಂಬರ್ ತಿಂಗಳಲ್ಲಿ ಪ್ರಸಾರವಾಗಲಿದೆ. ಈ ರಿಯಾಲಿಟಿ ಶೋ ಎರಡು ಹಂತಗಳಲ್ಲಿ ನಡೆಯಲಿದೆ. ಆಯ್ಕೆ ಹಂತ (ಅಡಿಶನ್ ರೌಂಡ್) ಮತ್ತು ಪ್ರಮುಖ ಹಂತ. ಮೊದಲು ಭಾಗವಹಿಸುವವರು ಆಯ್ಕೆ ಸುತ್ತಿನಲ್ಲಿ ಪ್ರವೇಶ ಪಡೆಯಬೇಕಾಗಿದೆ. ಆಯ್ಕೆ ಸುತ್ತಿಗೆ ನವೆಂಬರ್ 14ರವರೆಗೆ ನೋಂದಣಿಗೆ ಕಲಾವಕಾಶವಿದೆ. ಆಯ್ಕೆ ಸುತ್ತು ನವೆಂಬರ್ 21ರಂದು ನಡೆಯಲಿದೆ. ಪ್ರಮುಖ ಸುತ್ತಿಗೆ ಆಯ್ಕೆಯಾದ 32 ಮಂದಿ ಮಾತ್ರ ಭಾಗವಹಿಸಲಿದ್ದಾರೆ.

ಆಯ್ಕೆ ಸುತ್ತಿಗೆ ಆಸಕ್ತರು 9148272365ಗೆ ಕರೆ ಮಾಡಬಹುದು. ಪ್ರಮುಖ ಸುತ್ತಿನಲ್ಲಿ ಪಾಕತಜ್ಞರು ಸ್ಪರ್ಧಿಗಳ ವೇಗ, ಕ್ರಿಯಾಶೀಲತೆ, ನಾವಿನ್ಯ, ರುಚಿ, ಪೌಷ್ಠಿಕ, ಆರೋಗ್ಯ, ಸಮತೋಲಿತ ಆಹಾರ, ಕಡಿಮೆ ತ್ಯಾಜ್ಯ, ಸಮರ್ಪಕ ತಯಾರಿ, ಚೂರಿ ಬಳಕೆಯ ಕೌಶಲ್ಯ (ಕತ್ತರಿಸುವುದು, ತುಂಡು ಮಾಡುವುದು ಮತ್ತು ಸಿಪ್ಪೆ ಸುಲಿಯುವುದು, ಆಹಾರ ಉತ್ಪನ್ನಗಳ ಬಳಕೆ, ಸ್ವಚ್ಛತೆ ಮೊದಲಾದವುಗಳ ಆಧಾರದಲ್ಲಿ ತೀರ್ಪು ನೀಡಲಿದ್ದಾರೆ. ವಿಜೇತರು ಮಾಸ್ಟರ್ ಕ್ಲಾಸ್ ಚೆಫ್ ಆಫ್ ದಿ ಇಯರ್ ಬಿರುದಿನೊಂದಿಗೆ ಒಂದು ಲಕ್ಷ ರೂ. ನಗದು ಬಹುಮಾನವನ್ನು ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.

ಈ ರಿಯಾಲಿಟಿ ಶೋವನ್ನು ಆ್ಯಪಲ್ ಮಾರ್ಟ್ ಮತ್ತು ಸನ್ ಪ್ರೀಮಿಯಂ ರಿಫೈನ್ಡ್ ಸನ್‌ಫ್ಲವರ್ ಆಯಿಲ್‌ನವರು ಪ್ರಾಯೋಜಿಸುತ್ತಿದ್ದು, ಇಂಡಿಯನ್ ಡಿಸೈನ್ ಸ್ಕೂಲ್, ನಮ್ಮ ಟಿವಿ, ಓಶಿಯನ್ ಪರ್ಲ್, ಶುಗರ್ ಕ್ಲೌಡ್ ಬ್ರೌನೀಸ್, ಎಕೆ ಕ್ಲೆನ್‌ಝಾಫ್, www.varthabharati.in ಮತ್ತು ರೆಡ್‌ಎಫ್‌ಎಂ 93.5 ಸಹ ಪ್ರಾಯೋಜಕರಾಗಿ ಸಹಕರಿಸಲಿದ್ದಾರೆ ಎಂದು ರಾಮನಾಥ್ ತಿಳಿಸಿದರು.

ಈ ಸಂದರ್ಭ ಮಾಸ್ಟರ್ ಕ್ಲಾಸ್ ಚೆಫ್ ಆಫ್ ದಿ ಇಯರ್ 2020 ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಗೋಷ್ಠಿಯಲ್ಲಿ ಮಾಸ್ಟರ್ ಕ್ಲಾಸ್‌ನ ಸಿಎಂಒ ನಿಖಿಲ್ ‌ರಾಜ್, ಆ್ಯಪಲ್ ಮಾರ್ಟ್‌ನ ವ್ಯವಸ್ಥಾಪಕ ಹುಸೈನ್ ಶಾಫಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News