ಬ್ಯಾಂಕ್ ಆಫ್ ಬರೋಡಾಗೆ 5,552 ಕೋಟಿ ರೂ.ಲಾಭ

Update: 2020-10-29 14:23 GMT

ಮಂಗಳೂರು, ಅ.29: ಭಾರತದ ಸಾರ್ವಜನಿಕ ವಲಯದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ 2020-21ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 5,552 ಕೋಟಿ ರೂ. ಲಾಭ ಗಳಿಸಿದೆ.

ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.4ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.28ರಷ್ಟು ಅಧಿಕ. ಈ ಅವಧಿ ಯಲ್ಲಿ ಜೈವಿಕ ಚಿಲ್ಲರೆ ಮತ್ತು ಕೃಷಿಸಾಲ ಕ್ರಮವಾಗಿ ಶೇ.16.8 ಹಾಗೂ 16.5ರಷ್ಟು ಹೆಚ್ಚಿದೆ. ಚಿಲ್ಲರೆ ಮಂಜೂರಾತಿ ಮತ್ತು ಹಂಚಿಕೆಯು 2ನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.119ರಷ್ಟು ಹೆಚ್ಚಿದ್ದು, ಇದು ಕಳೆದ ತ್ರೈಮಾಸಿಕಕ್ಕಿಂತ ಶೇ.37ರಷ್ಟು ಅಧಿಕವಿದೆ.

ಜಾಗತಿಕ ಸಾಲ ನೀಡಿಕೆ ಶೇ.5.3 ಹೆಚ್ಚಿದ್ದು, ವಾಹನ ಸಾಲ ಶೇ.34.8ರಷ್ಟು ಪ್ರಗತಿ ಕಂಡಿದೆ. ಶುಲ್ಕಗಳಿಂದ ಬಂದ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.3.9ರಷ್ಟು ಅಧಿಕವಾಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.22.2 ಹೆಚ್ಚಳ ಕಂಡಿದೆ. ವ್ಯಾಪಾರ ವಹಿವಾಟುಗಳಿಂದ ಬರುವ ಲಾಭ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.85.9ರಷ್ಟು ಮತ್ತು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.6.8ರಷ್ಟು ಹೆಚ್ಚಿದೆ.

ನಿವ್ವಳ ಎನ್‌ಪಿಎ ಅನುಪಾತ 2020ರ ಸೆ.30ಕ್ಕೆ ಶೇ.9.14ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.10.25ರಷ್ಟಿತ್ತು. ಈ ತ್ರೈಮಾಸಿಕದಲ್ಲಿ ನಿವ್ವಳ ಲಾಭ 1,679 ಕೋಟಿ ರೂ. ಆಗಿದ್ದು, ಕ್ರೋಡೀಕೃತ ನಿವ್ವಳ ಲಾಭ 1,771 ಕೋಟಿ ರೂ.ಗೆ ಹೆಚ್ಚಿದೆ ಎಂದು ಬ್ಯಾಂಕ್‌ನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News