ಉಡುಪಿ ಜಿಲ್ಲೆಯಾದ್ಯಂತ ಸರಳ ಮೀಲಾದುನ್ನಬಿ

Update: 2020-10-29 15:53 GMT

ಉಡುಪಿ, ಅ.29: ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮಾರ್ಗ ಸೂಚಿಯಂತೆ ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಮೀಲಾದುನ್ನಬಿ ಸರಳವಾಗಿ ಆಚರಿಸಲಾಯಿತು.

ಮೂಳೂರು, ಕಾಪು, ಪಡುಬಿದ್ರಿ, ಉಚ್ಚಿಲ, ಗಂಗೊಳ್ಳಿ, ಕಾರ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ಧ್ವಜಾರೋಹರಣ ನೆರವೇರಿಸ ಲಾಯಿತು. ಬಳಿಕ ಮಸೀದಿಯಲ್ಲಿಯೇ ಮಾಸ್ಕ್ ಧರಿಸಿಕೊಂಡು, ಸುರಕ್ಷಿತ ಅಂತರ ಕಾಪಾಡಿ ಮೌಲಿದ್ ಪಾರಾಯಣ ನಡೆಸಲಾಯಿತು.

ಜಿಲ್ಲಾ ಸಂಯುಕ್ತ ಜಮಾಅತ್ ಕೇಂದ್ರ ಮಸೀದಿಯಾಗಿರುವ ಮುಳೂರು ಜುಮಾ ಮಸೀದಿಯಲ್ಲಿ ಜಿಲ್ಲಾ ಸಹಾಯಕ ಖಾಝಿ ಅಲ್‌ಹಾಜ್ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮುಳೂರು ಮೀಲಾದುನ್ನಬಿ ಸಂದೇಶ ನೀಡಿದರು. ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಎಚ್.ಐ.ಯೂಸುಫ್ ಸಖಾಫಿ ಕೋಡಿ, ಅಶ್ರಫ್ ಸಖಾಫಿ ಕನ್ನಂಗಾರ್, ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಖಲಂದರ್ ಸಅದಿ ಸಾಣೂರು, ಅಬ್ದುಲ್ಲತೀಫ್ ಫಾಳಿಲಿ ನಾವುಂದ, ಅಬ್ದುರ್ರಶೀದ್ ಸಖಾಫಿ ಮಜೂರು, ಇಸ್ಹಾಖ್ ಫೈಝಿ ಉಚ್ಚಿಲ ಮುಂತಾದ ಉಲಮಾಗಳು ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮೀಲಾದ್ ಸಂದೇಶವನ್ನು ನೀಡಿದರು.

ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು, ಕೇಂದ್ರ ಸಮಿತಿ ಅಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್ ಮೂಳೂರು, ಹಾಜಿ ತೌಫೀಕ್ ಅಬ್ದುಲ್ಲಾ ನಾವುಂದ, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ಹಾಜಿ ಎಂಎ ಬಾವು ಮೂಳೂರು, ವೈಬಿಸಿ ಬಶೀರ್ ಅಲಿ ಮೂಳೂರು ಹಾಗೂ ಮತ್ತಿತರ ಸಂಯುಕ್ತ ಜಮಾಅತ್ನ ಜಿಲ್ಲಾ ನಾಯಕರ ನೇತೃತ್ವದಲ್ಲಿ ಮೀಲಾದ್ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತದ ನಿಷೇಧದ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೂ ಯಾವುದೇ ಮೆರವಣಿಗೆಗಳು ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News