ಹೂಡೆ ಜಮಾಅತೆ ಇಸ್ಲಾಮಿ ಹಿಂದ್‌ನಿಂದ ಮನೆ ಹಸ್ತಾಂತರ

Update: 2020-10-29 15:57 GMT

ಉಡುಪಿ, ಅ.29: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿ ಯಿಂದ ಹೂಡೆಯ ತಾಜುದ್ದೀನ್ ಕುಟುಂಬಕ್ಕೆ ನಿರ್ಮಿಸಿಕೊಡಲಾದ ನೂತನ ಮನೆಯನ್ನು ಇಂದು ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ ಮನೆಯ ಕೀಲಿ ಕೈಯನ್ನು ಮನೆಯ ಮಾಲಕ ತಾಜುದ್ದೀನ್ ಅವರಿಗೆ ಹಸ್ತಾಂತರಿಸಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಹೂಡೆ ಘಟಕಾಧ್ಯಕ್ಷ ಅಬ್ದುಲ್ ಕಾದಿರ್ ಮಾತನಾಡಿ, ದಾನಿಗಳ ಸಹಾಯದ ಮೂಲಕ ಜಮಾಅತೆ ಇಸ್ಲಾಮಿ ಹಿಂದ್ ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ. ಇದೀಗ ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯಲ್ಲಿ ಜಾತಿ, ಧರ್ಮ ನೋಡದೆ ಎಲ್ಲರಿಗೂ ಸಹಾಯ ಮಾಡುತ್ತಿದೆ. ಈಗಾಗಲೇ ದಾನಿಗಳ ಸಹಾಯ ಪಡೆದು ಹಲವರಿಗೆ ಮನೆ, ಉದ್ಯೋಗ, ಆರೋಗ್ಯ ಅರ್ಥಿಕ ನೆರವಿನ ಸಹಾಯ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಪಂ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾಧ್ಯಕ್ಷ ಶಬೀರ್ ಮಲ್ಪೆ, ಪ್ರೊ.ಅಬ್ದುಲ್ ಅಝೀಝ್, ಮೌಲಾನ ಆದಮ್ ಸಾಹೇಬ್, ವೌಲಾನ ಅಸ್ಘರ್ ಅಲಿ ಖಾಸ್ಮಿ, ಇದ್ರಿಸ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News