ಐಇಇಇ ಡಿಸ್ಕವರ್ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Update: 2020-10-29 16:23 GMT

ಉಡುಪಿ, ಅ.29: ಬಂಟಕಲ್ ಶ್ರೀಮದ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಆಶ್ರಯದಲ್ಲಿ ಐಇಇಇ ಮಂಗಳೂರು ಉಪ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಮೂರು ದಿನಗಳ ಡಿಸ್ಟ್ರಿಬ್ಯೂಟೆಡ್ ಕಂಪ್ಯೂ ಟಿಂಗ್, ವಿಎಲ್‌ಎಎಸ್‌ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ ಮತ್ತು ರೋಬೊಟಿಕ್ಸ್- ಐಇಇಇ ಡಿಸ್ಕವರ್ 2020 ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ಇಂದು ನಡೆಯಿತು.

ಸಮ್ಮೇಳನವನ್ನು ಉದ್ಘಾಟಿಸಿದ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಅವಶ್ಯಕತೆ ಜೊತೆಗೆ ಉತ್ಕೃಷ್ಟತೆಯನ್ನು ಸಾಧಿಸುವ ತುಡಿತ ಮತ್ತು ಸತ್ಯದ ಅನ್ವೇಷಣೆ ಸಂಶೋಧನೆಗೆ ಕಾರಣವಾಗುತ್ತದೆ. ಹೊಸ ಸಂಶೋಧನೆಯನ್ನು ಮಾಡುವು ದರ ಜೊತೆಗೆ ಅದನ್ನು ಪ್ರಚುರಪಡಿಸು ವುದು ಕೂಡ ಅನಿವಾರ್ಯ. ಸಮ್ಮೇಳನಗಳು ಹೊಸ ಅನ್ವೇಷಣೆಗಳ ಪ್ರಕಾಶನಕ್ಕೆ ಅನುಕೂಲ ಮಾಡಿಕೊಡುತ್ತವೆ ಎಂದರು.

ಮುಖ್ಯ ಅತಿಥಿಯಾಗಿ ಡಾ.ಯು.ಸಿ.ನಿರಂಜನ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಸಮ್ಮೇಳನದ ಸಿಡಿಯನ್ನು ಬಿಡುಗಡೆಗೊಳಿಸಿದರು. ಅ.30 ಮತ್ತು 31ರಂದು ನಡೆಯಲಿರುವ ವಿಶೇಷ ಉಪನ್ಯಾಸಗಳು ಮತ್ತು ತಾಂತ್ರಿಕ ಪ್ರಬಂಧ ಮಂಡನೆಗಳ ಕುರಿತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಡಾ.ಬಾಲಚಂದ್ರ ಆಚಾರ್ ವಿವರಣೆ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಉಪಪ್ರಾಂಶು ಪಾಲ ಡಾ.ಗಣೇಶ್ ಐತಾಳ್ ವಂದಿಸಿದರು. ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಕಾರ್ಯಕ್ರಮ ನಿೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News