ಅ. 30ರಿಂದ ವಿ4 ಸ್ಟ್ರೀಮ್‍ನಲ್ಲಿ ‘ಸೆಕೆಂಡ್ ಹಾಫ್’

Update: 2020-10-29 17:09 GMT

ಮಂಗಳೂರು : ಕರ್ನಾಟಕದ ಮೊಟ್ಟ ಮೊದಲ ಓಟಿಟಿ ಪ್ಲಾಟ್ ಫಾರಂ ವಿ4 ಸ್ಟ್ರೀಮ್ ಈ ವಾರ ಮತ್ತೊಂದು ಡಿಫರೆಂಟಾದ ಸಿನಿಮಾವನ್ನು ಹೊತ್ತು ತರುತ್ತಿದೆ. ಈ ಸಿನಿಮಾದ ಹೆಸರು  ‘ಸೆಕೆಂಡ್ ಹಾಫ್.’. ಟೈಟಲ್ ಮೂಲಕನೇ ಬಹಳ ಸದ್ದು ಮಾಡ್ತಾ ಇರುವ ಕನ್ನಡ ಸಿನೆಮಾ ಅಕ್ಟೋಬರ್ 30ರಿಂದ ವಿ4 ಸ್ಟ್ರೀಮ್‍ನಲ್ಲಿ ಸ್ಟ್ರೀಮಿಂಗ್ ಆಗಲಿದೆ. 

ಹೆಣ್ಣು ಮನೆಬೆಳಗುವ ದೀಪವು ಹೌದು.., ಮನಸ್ಸು ಬೆಳಗುವ ಜ್ಯೋತಿಯೂ ಹೌದು.. ಭೃಷ್ಟಾಚಾರ, ಅತ್ಯಾಚಾರ, ಅಮಾನವೀಯತೆ ಹೀಗೆ ಹತ್ತು ಹಲವಾರು ರೀತಿಯ ಹಿಂಸಾತ್ಮಕ ಘಟನೆಗಳು ನಡೆಯುತ್ತಿರುವ ಈ ಸಮಾಜದಲ್ಲಿ ನಡೆಯಬೇಕಿರುವ ಬದಲಾವಣೆ, ಅದೂ ಒಂದು ಹೆಣ್ಣು ಮನಸ್ಸು ಮಾಡಿದರೆ ಅನ್ಯಾಯಗಳನ್ನು ಹೇಗೆ ಮಟ್ಟ ಹಾಕಿ ನ್ಯಾಯ ಒದಗಿಸಬಹುದು ಎಂಬ ನಿಜ ಜೀವನದ ಚಿತ್ರಣವೇ ಈ ‘ಸೆಕೆಂಡ್ ಹಾಫ್’. 
ಬೃಂದಾವನ ಎಂಟರ್‍ಪ್ರೈಸಸ್ ಬ್ಯಾನರ್‍ನಡಿಯಲ್ಲಿ ನಾಗೇಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ.. ಬರಹಗಾರರಾಗಿ, ಹಲವಾರು ಸಿನೆಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ‘ಯೋಗಿ ದೇವೆಗಂಗೆ’ ಅವರ ಚೊಚ್ಚಲ ಸಿನೆಮಾ ಇದಾಗಿದೆ. ಇನ್ನು ಈ ಸಿನೆಮಾದಲ್ಲಿ ಹೊಸಬರ ಜೊತೆಗೆ ಸ್ಯಾಂಡಲ್‍ವುಡ್‍ನ ಖ್ಯಾತ ನಟ, ನಟಿಯರ ನಟನೆಯೂ ಇದೆ. ಹೂವಿನ ಬೆಡಗಿ ಪ್ರೀಯಾಂಕ ಉಪೇಂದ್ರ ಅವರು ಕ್ಲಾಸ್‍ನಿಂದ ಮಾಸ್ ಕಡೆಗೆ ಹೆಜ್ಜೆ ಹಾಕಿ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾದಲ್ಲಿ ಎರಡು ರೀತಿಯ ಕಾರೆಕ್ಟರ್‍ಗಳಲ್ಲಿ ಕಾಣಿಸಿಕೊಂಡಿದ್ದು, ಒಂದು ಸಾದ ಹುಡುಗಿಯಾಗಿದ್ದು ಇನ್ನೊಂದು ಪೊಲೀಸ್ ಪೇದೆಯ ಪಾತ್ರದಲ್ಲಿ ಕಾಣಿಸಿಕೊಂಡು ತನ್ನ ವಿಭಿನ್ನ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ, ನಟ, ಗಾಯಕರಾದ ರಿಯಲ್‍ಸ್ಟಾರ್ ಉಪೇಂದ್ರರ ಸಹೋದರನ ಮಗ ನಿರಂಜನ್ ಸುಧೀಂದ್ರ ಅವರ ಮೊಟ್ಟ ಮೊದಲ ಸಿನೆಮಾ ಇದಾಗಿದ್ದು, ಲೀಡ್ ರೋಲ್‍ನಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಶರತ್ ಲೋಹಿತಾಶ್ವ, ಕಾಮಿಡಿ ಕ್ವೀನ್ ಶಾಲಿನಿ, ವೀಣಾ ಸುಂದರ್, ಸತ್ಯಜಿತ್, ನಾಯಕಿ ಸುರಭಿ ಸಂತೋಷ್ ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ..

ಸಿನೆಮಾದ ಜೊತೆಗೆ ಇದರ ಸಾಂಗ್ಸ್ ಕೂಡ ಸಖತ್ ಹಿಟ್ ಆಗಿದೆ. ಈ ಸಿನೆಮಾದಲ್ಲಿ ಒಟ್ಟು 3 ಹಾಡುಗಳಿದ್ದು, 3 ಹಾಡುಗಳು ತುಂಬಾನೆ ಚೆನ್ನಾಗಿ ಮೂಡಿಬಂದಿದೆ. ಯೋಗರಾಜ್ ಭಟ್ ಮತ್ತು ಯೋಗಿ ದೇವಗಂಗೆ ಯವರು ಸಾಹಿತ್ಯವನ್ನು ಬರೆದಿದ್ದು, ಚೇತನ್ ಸೋಸ್ಕರವರ ಸಂಗೀತ ಜೊತೆಗೆ ಅಪರಾಜಿತ್ ಶ್ರೀಸ್‍ರವರ ಹಿನ್ನಲೆ ಸಂಗೀತದೊಂದಿಗೆ ಈ ಕ್ರೈಮ್ ಥ್ರಿಲ್ಲರ್ ಮೂವಿ ಮೂಡಿಬಂದಿದೆ. ಇದೀಗ ಈ ಸಿನೆಮಾ ವಿ4 ಸ್ಟ್ರೀಮ್‍ ನಲ್ಲಿ ಸ್ಟ್ರೀಮಿಂಗ್ ಆಗ್ತಾ ಇದ್ದು, ಸಿನಿಪ್ರಿಯರು ವಿ4 ಸ್ಟ್ರೀಮ್ ಒಟಿಟಿ ಆಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ನೋಡಿ ಆನಂದಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News