×
Ad

ಕೃಷ್ಣಾಪುರ : ಬದ್ರಿಯಾ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ಕಾರ್ಯಕ್ರಮ

Update: 2020-10-29 23:05 IST

ಕೃಷ್ಣಾಪುರ : ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಮ್ ಜಮಾಅತ್ 7ನೇ ವಿಭಾಗ ಕೃಷ್ಣಾಪುರದಲ್ಲಿ ಮೀಲಾದುನ್ನಬಿ ಕಾರ್ಯಕ್ರಮವು ಗುರುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿಯ ಸಂಯುಕ್ತ ಖಾಜಿ ಅಲ್ ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಖತೀಬ್ ಮೌಲಾನಾ ಉಮರ್ ಫಾರೂಕ್ ಸಖಾಫಿ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಲ್ ಹಾಜ್ ಬಿ.ಎಂ. ಮುಮ್ತಾಝ್ ಅಲಿ, ಮಾಜಿ ಅಧ್ಯಕ್ಷರುಗಳಾದ ಹಾಜಿ ಪಿ.ಎಂ. ಉಸ್ಮಾನ್, ಹಾಜಿ ಟಿ.ಎಂ. ಶರೀಫ್, ಹಾಜಿ ಬಿ.ಎಂ. ಹುಸೈನ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಜಮಾಅತಿನ ಪದಾಧಿಕಾರಿಗಳು ಮತ್ತು ಮದ್ರಸ ಮುಅಲ್ಲಿಮರು ಉಪಸ್ಥಿತರಿದ್ದರು.

ಮೀಲಾದುನ್ನಬಿ ಕಾರ್ಯಕ್ರಮವನ್ನು ಸುರಕ್ಷಿತ ಅಂತರ ಪಾಲಿಸುವ ಉದ್ದೇಶದಿಂದ ಬದ್ರಿಯಾ ಜುಮಾ ಮಸೀದಿ ಮತ್ತು ಅಧೀನದಲ್ಲಿರುವ ಮಸೀದಿಗಳಾದ ಬದ್ರುಲ್ ಹುದಾ ಜುಮಾ ಮಸ್ಜಿದ್, ಈದ್ಗಾ ಜುಮಾ ಮಸ್ಜಿದ್, ಮಸ್ಜಿದ್ ತ್ವಯಿಬಾ ಜುಮಾ ಮಸ್ಜಿದ್, ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮಸ್ಜಿದುಲ್ ಹುದಾ ಜುಮಾ ಮಸೀದಿಗಳಲ್ಲಿ ಮತ್ತು ಆಯಾ ಪ್ರದೇಶದಲ್ಲಿ ಮೌಲೂದ್ ಪಾರಾಯಣ ಮತ್ತು ಮನೆ ಮನೆಗೆ ಅನ್ನ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News