×
Ad

ಪೆರಾಜೆ : ಎಸ್.ಡಿ.ಪಿ.ಐ. ಗ್ರಾ.ಪಂ. ಚುನಾವಣಾ ಪೂರ್ವ ಸಿದ್ದತಾ ಸಭೆ

Update: 2020-10-30 14:45 IST

ವಿಟ್ಲ : ಅ.30: ಎಸ್.ಡಿ.ಪಿ.ಐ. ವತಿಯಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ದತಾ ಸಭೆಯು ಮಾಣಿ ಸಮೀಪದ ಪೆರಾಜೆಯಲ್ಲಿ ಗುರುವಾರ ನಡೆಯಿತು.

ಸಭೆಯಲ್ಲಿ ಚುನಾವಣೆಗೆ ಪಕ್ಷದ ವತಿಯಿಂದ ಪೆರಾಜೆ ಗ್ರಾಪಂಗೆ  ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಹಾಗೂ ಇನ್ನಿತರ ಹಲವಾರು ವಿಚಾರಗಳ ಕುರಿತಂತೆ ಚರ್ಚಿಸಲಾಯಿತು. ಈ ಸಂದರ್ಭ ಪೆರಾಜೆಯಲ್ಲಿ ಪಕ್ಷದ ತಾತ್ಕಾಲಿಕ ಸಮಿತಿಯನ್ನು ರಚಿಸಲಾಯಿತು.

ಸಭೆಯಲ್ಲಿ ಮಾಣಿ ವಲಯದ ಗ್ರಾಪಂ ಚುನಾವಣಾ ಉಸ್ತುವಾರಿಗಳಾದ ಲತೀಫ್ ಕೊಡಾಜೆ, ಝಕರಿಯಾ ಗೋಳ್ತಮಜಲು, ಜವಾಝ್ ಕಲ್ಲಡ್ಕ, ಸತ್ತಾರ್ ಕಲ್ಲಡ್ಕ, ಸಮಿತಿ ಅಧ್ಯಕ್ಷರಾದ ಹುಸೈನ್ ಜಿ., ಕಾರ್ಯದರ್ಶಿ ಇರ್ಫಾನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸತ್ತಾರ್ ಸ್ವಾಗತಿಸಿದರು. ಇರ್ಫಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News