×
Ad

ಇಡೀ ಗುಜರಾತ್ ಕಾಂಗ್ರೆಸ್ ಘಟಕವನ್ನು 25 ಕೋಟಿ ರೂ. ಗೆ ಖರೀದಿಸಬಹುದು ಎಂದ ಸಿಎಂ ವಿಜಯ್ ರೂಪಾನಿ

Update: 2020-10-30 15:07 IST

ಅಹ್ಮದಾಬಾದ್: ಕಾಂಗ್ರೆಸ್ ಪಕ್ಷದ ಇಡೀ ರಾಜ್ಯ ಘಟಕವನ್ನು 25 ಕೋಟಿ ರೂ. ಗೆ ಖರೀದಿಸಬಹುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗುರುವಾರ ಸುರೇಂದ್ರ ನಗರ್ ಸಮೀಪದ ಲಿಂಬ್ಡಿ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.

"ಈಗಿನ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಅವರ ಮೌಲ್ಯಗಳಿಂದ ದೂರವಾಗಿದೆ. ಈಗಿನ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಅವರ ಕಾಲದಲ್ಲಿದ್ದ ಕಾಂಗ್ರೆಸ್ ಪಕ್ಷದಂತಿಲ್ಲ. ಈಗಿನ ಕಾಂಗ್ರೆಸ್ ಕೇವಲ ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷವಾಗಿದೆ,'' ಎಂದು ಉಪಚುನಾವಣೆ ಪ್ರಚಾರ ರ್ಯಾಲಿಯಲ್ಲಿ ರೂಪಾನಿ ಹೇಳಿದರು.

ಕಾಂಗ್ರೆಸ್ ಪಕ್ಷದ ಮಾಜಿ ಕರ್ಜಾನ್ ಶಾಸಕರನ್ನು 'ಬಿಜೆಪಿ ರೂ. 25 ಕೋಟಿ ಹಾಗೂ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿ ಖರೀದಿಸಿದೆ'' ಎಂಬ ಕಾಂಗ್ರೆಸ್ ಆರೋಪಕ್ಕೆ ರೂಪಾನಿ ಪ್ರತಿಕ್ರಿಯಿಸುತ್ತಿದ್ದರು,.

"ಕಾಂಗ್ರೆಸ್ ಪಕ್ಷ ತನ್ನ ಶಾಸಕರುಗಳಿಗೇ ಗೌರವ ನೀಡುತ್ತಿಲ್ಲ,'' ಎಂದೂ ಅವರು ಆರೋಪಿಸಿದರು.

ಅಕ್ಟೋಬರ್ 26ರಂದು ಇನ್ನೊಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ವೇಳೆ ರೂಪಾನಿ ಕಾಂಗ್ರೆಸ್ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News