'ಮಾನವ ಕುಲದ ಶ್ರೇಷ್ಟ ಮಾರ್ಗದರ್ಶಕ' ಪುಸ್ತಕ ವಿತರಣೆ
Update: 2020-10-30 21:56 IST
ಉಡುಪಿ, ಅ. 30: ನಮ್ಮ ನಾಡ ಒಕ್ಕೂಟ ಕುಂದಾಪುರ ಘಟಕದಿಂದ ಶಾಂತಿ ಪ್ರಕಾಶನ ಮಂಗಳೂರು ಇವರು ಕೊಡ ಮಾಡಿದ ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಟ ಮಾರ್ಗದರ್ಶಕ ಪುಸ್ತಕವನ್ನು ಕುಂದಾಪುರದ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಂದು ವಿತರಿಸಲಾಯಿತು.
ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕುಂದಾಪುರ ಪೊಲೀಸ್ ಠಾಣೆಯ ಎಸ್ಸೈ ಸದಾಶಿವ, ಕುಂದಾಪುರದ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಸುಪ್ರಿತಾ ಶೆಟ್ಟಿ, ರೂಪ, ನವೀನ್ ಕುಮಾರ್, ಕುಂದಾಪುರದ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಅವರಿಗೆ ಪುಸ್ತಕವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹುಸೈನ್ ಹೈಕಾಡಿ, ಉಪಾಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ಸಯ್ಯದ್ ಮಿರ್ ಮುಹಮ್ಮದ್ ಉಪಸ್ಥಿತರಿದ್ದರು.