×
Ad

ಕಾಪು : ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕರು

Update: 2020-10-30 22:10 IST

ಕಾಪು : ತ್ಯಾಜ್ಯ ಶೇಖರಣೆಯ ವೇಳೆ ಕಳೆದು ಹೋಗಿದ್ದ ಚಿನ್ನದ ಬ್ರಾಸ್‍ಲೈಟನ್ನು ವಾರೀಸುದಾರರಿಗೆ ನೀಡುವ ಮೂಲಕ ಕಾಪು ಪುರಸಭೆಯ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

ಇಲ್ಲಿನ ಕಾಪು ಪುರಸಭೆಯ ಕಸ ವಿಲೇವರಿಯ ಪೌರಕಾರ್ಮಿಕರು ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್‍ನಲ್ಲಿ ಕಸದ ಜತೆ ಕಳೆದು 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್‍ನ್ನು ಪತ್ತೆಯಾಯಿತು. ಬಳಿಕ ಇದು ರೋಲ್ಡ್ ಗೋಲ್ಡ್ ಆಗಿರಬಹುದು ಎಂದು ಕಸದಲ್ಲಿ ತುಂಬಿಸಿದರು. ಆದರೆ ಕಸ ವಿಲೇವರಿ ಘಟಕದಲ್ಲಿ ಪರೀಕ್ಷಿಸಿದಾಗ ಇದು ಚಿನ್ನ ಎಂಬುವುದು ತಿಳಿಯಿತು. ಬಳಿಕ ಅದೇ ಕಟ್ಟಡಕ್ಕೆ ಬಂದು ವಾರೀಸುದಾರರನ್ನು ಪತ್ತೆ ಮಾಡಿ ಬ್ರಾಸ್ ಲೈಟ್ ವಾರಸುದಾರ ಮುಹಮ್ಮದ್ ಸಫ್ವಾನ್ ಅವರಿಗೆ ವಾಪಾಸು ನೀಡಿದರು. ಪೌರಕಾರ್ಮಿಕರಾದ ಚಾಲಕ ಸುಧೀರ್ ಸುವರ್ಣ, ವಿಜಯ್, ಸುನೀಲ್ ಅವರ  ಈ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಅಲ್ಲದೆ ವಾರಸುದಾರರು ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News