ಕುಕ್ಕಳ ಗ್ರಾಮ ಪಂಚಾಯತ್ ಚುನಾವಣೆ : ಎಸ್ಡಿಪಿಐ ಅಭ್ಯರ್ಥಿ ಘೋಷಣೆ

Update: 2020-10-31 05:51 GMT

ಬೆಳ್ತಂಗಡಿ: ಮುಂಬರುವ ಪಂಚಾಯತ್  ಚುನಾವಣೆಯ ಕುಕ್ಕಳ ಗ್ರಾಮದ ವಾರ್ಡ್ ಸಂಖ್ಯೆ-1 ಮತ್ತು 2ರ ಎಸ್ಡಿಪಿಐ ಪಕ್ಷದ ಅಭ್ಯರ್ಥಿಗಳ ಮೊದಲ ಹಂತದ ಘೋಷಣಾ ಕಾರ್ಯಕ್ರಮ ಪುಂಜಾಲಕಟ್ಟೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಕುಕ್ಕಲ ಗ್ರಾಮ ಸಮಿತಿ ಅಧ್ಯಕ್ಷರಾದ ಶಮೀರ್ ಪುಂಜಾಲಕಟ್ಟೆ ವಹಿಸಿದ್ದರು. ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹೈದರ್ ನೀರ್ಸಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚರ್ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದರು. ಅಭ್ಯರ್ಥಿಗಳ ಘೋಷಣೆಯನ್ನು ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರಾದ ಹೈದರ್ ನೀರ್ಸಲ್ ಮಾಡಿದರು.

ಕುಕ್ಕಳ ಗ್ರಾಮದ ಅಭ್ಯರ್ಥಿ ಘೋಷಣೆ ವಿವರ

ಒಂದನೇ ವಾರ್ಡಿನ ಅಭ್ಯರ್ಥಿಗಳು

1. ಮಹಮ್ಮದ್ ಹನೀಫ್ ಪುಂಜಾಲಕಟ್ಟೆ

2. ಸಹರ ಸನಾಫ್

ಎರಡನೇ ವಾರ್ಡಿನ  ಅಭ್ಯರ್ಥಿಗಳು

1. ಮಹಮ್ಮದ್ ಅಶ್ಫಾಕ್

2. ಅಬ್ದುಲ್ ಲತೀಫ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಯಿತು.

ವೇದಿಕೆಯಲ್ಲಿ ಪುಂಜಾಲಕಟ್ಟೆ ಜಮಾಅತ್ ಅಧ್ಯಕ್ಷರಾದ ಯೂಸುಫ್ ಹಾಜಿ, NIYA ಪುಂಜಾಲಕಟ್ಟೆ ಅಧ್ಯಕ್ಷರಾದ ಶಾಜಿ ಹುಸೈನ್, ಪುಂಜಾಲಕಟ್ಟೆ ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದರ್, ಪಿಎಚ್ ಉಮರ್ ಪುಂಜಾಲಕಟ್ಟೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬಿ.ಎಮ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಡ್ವೋಕೇಟ್ ಅತಾವುಲ್ಲಾ ಪುಂಜಾಲಕಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಲತೀಫ್ ಪುಂಜಾಲಕಟ್ಟೆ ಸ್ವಾಗತಿಸಿ, ರ‌‌ವೂಫ್ ಪುಂಜಾಲಕಟ್ಟೆ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News