'ಅಲ್ ಮಸಾಜಿದ್' ಕರ್ನಾಟಕದ ಆರು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾರ್ಪಣೆ

Update: 2020-10-31 11:24 GMT

ಮಂಗಳೂರು : ಮದೀನಾದಲ್ಲಿ ಪ್ರವಾದಿಯವರು ನಮಾಝ್ ನಿರ್ವಹಿಸಿದ ಮತ್ತು ನಿರ್ಮಿಸಿದ ಮಸ್ಜಿದ್‌ಗಳು ಬಹಳಷ್ಟಿವೆ. ಅವುಗಳಲ್ಲಿ ಕೆಲವು ಆಯ್ದ ಮಸ್ಜಿದ್‌ಗಳ ಗತಕಾಲದ ಚರಿತ್ರೆಯ ಬುಡ ಮಟ್ಟ ಶೋಧಿಸಿ ಗಲ್ಫ್ ಕನ್ನಡಿಗ, ಸಾಹಿತ್ಯ ಚೇತನ ಪ್ರಶಸ್ತಿ ಪುರಸ್ಕೃತ ಇಸ್ಹಾಕ್ ಸಿ.ಐ. ಫಜೀರ್ ರಚಿಸಿದ ಮತ್ತು ಈ ಸಂಬಂಧವಾಗಿ ಕನ್ನಡದಲ್ಲಿ ಪ್ರಥಮವಾದ "ಅಲ್ ಮಸಾಜಿದ್" ಎಂಬ ಕನ್ನಡ ಕೃತಿಯು ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ, ಚಿಕ್ಕ ಮಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಹಾಗೂ ಸೌದಿ ಅರೇಬಿಯಾದಲ್ಲಿ ಲೋಕಾರ್ಪಣೆಗೊಂಡಿತು.

ದ.ಕ.ಜಿಲ್ಲೆಯ ದಾರುಲ್ ಇರ್ಷಾದ್ ಮಾಣಿ, ಅಲ್ ಮದೀನಾ ಮಂಜನಾಡಿ, ಅಶ್ಃಅರಿಯ್ಯಃ ಸುರಿಬೈಲು, ಮದೀನತುಲ್ ಮುನವ್ವರ ಮೂಡಡ್ಕ, ಬೆಳ್ತಂಗಡಿ, ಅಲ್ ಖಾದಿಸಃ ಎಜುಕೇಶನ್ ಅಕಾಡಮಿ ಕಾವಳಕಟ್ಟೆ, ದಾರುಲ್ ಮುಸ್ತಫ ಮೋರಲ್ ಅಕಾಡಮಿ ನಚ್ಚಬೆಟ್ಟು, ಮೈಮುನಾ ಫೌಂಡೇಶನ್ (ರಿ) ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಷನ್ ಸೆಂಟರ್ ಮಂಗಳೂರು.

ಉಡುಪಿ ಜಿಲ್ಲೆಯ 

ಮುಹಿಯುದ್ದೀನ್ ಮಸ್ಜಿದ್ ನಾವುಂದ, ಮುಹಿಯುದ್ದೀನ್ ಜುಮಾ ಮಸ್ಜಿದ್ ಹಂಗಳೂರು, ಚಿಕ್ಕ ಮಗಳೂರು ಜಿಲ್ಲೆಯ ಹಂಝತುಲ್ಲು ಖರ್ರಾರ್ ಜುಮಾ ಮಸೀದಿ ಸಣ್ಣಕೇರೆ, ಕೊಪ್ಪ ಬೆಂಗಳೂರಿನ ಸ‌ಅದಿಯ್ಯಃ ಫೌಂಡೇಶನ್, ವಿಸ್ಡಂ ಮಸ್ಜಿದ್ ಗಾಂಧಿನಗರ, ಮೆಜೆಸ್ಟಿಕ್.

ಶಿವಮೊಗ್ಗ ಜಿಲ್ಲೆಯ ಮರ್ಕಝ್ ಸ‌ಆದಃ, ಅಲ್ ಹಿದಾಯ ಮಸ್ಜಿದ್, ದಾವಣಗೆರೆ ಜಿಲ್ಲೆಯ ದಾರುಲ್ ಇಹ್ಸಾನ್ ವಿದ್ಯಾಸಂಸ್ಥೆ ಕಾಳಿದಾಸ್ ನಗರ, ಹರಿಹರ ಮತ್ತು ಸೌದಿ ಅರೇಬಿಯಾದ ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್‌ನಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿದೆ. ಲೇಖಕ ಇಸ್ಹಾಕ್ ಸಿ.ಐ.ಫಜೀರ್   ಅವರು ಸೌದಿಯಲ್ಲಿದ್ದುಕೊಂಡು ಬರೆದ ಇದು ಎರಡನೇ ಕೃತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News