ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪುಣ್ಯತಿಥಿ, ಸರದಾರ್ ವಲ್ಲಭಬಾಯಿ ಪಟೇಲ್ ‌ಜನ್ಮ ದಿನಾಚರಣೆ

Update: 2020-10-31 12:03 GMT

ಮಂಗಳೂರು, ಅ.31: ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರದಾರ್ ವಲ್ಲಭಬಾಯಿ ಪಟೇಲ ಜನ್ಮ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಇಂದಿರಾ ಗಾಂಧಿ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಪಾಲಿನ ಕಣ್ಮಣಿಯಾಗಿದ್ದರು ಎಂದರು.

ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದ ಬಳಿಕ ಸಮಾಜದ ದುರ್ಬಲ ವರ್ಗಕ್ಕಾಗಿ ಹೋರಾಟ ಮಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವುದನ್ನು ಸಂಘ ಪರಿವಾರ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಭಯೋತ್ಪಾದನೆಗೆ ಮೊದಲು ಆಹುತಿಯಾಗಿದ್ದು ಕಾಂಗ್ರೆಸ್ ನಾಯಕರು ಎಂದವರು ಹೇಳಿದರು.

ವಲ್ಲಭಬಾಯಿ ಪಟೇಲರು ಪ್ರಧಾನಮಂತ್ರಿ ಆಗಬೇಕಿತ್ತು. ಅವರಿಗೆ ಮೋಸ ಮಾಡಲಾಗಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ರಮಾನಾಥ ರೈ ಹೇಳಿದರು.

ಕಾರ್ಯಕ್ರಮದಲ್ಲಿ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿ.ಪಂ. ಸದಸ್ಯ ಶಾಹುಲ್ ಹಮೀದ್, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮೋಹನ್ ಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವದ್ ಸುಳ್ಯ, ಪದ್ಮನಾಭ ನರಿಂಗಾನ, ನೀರಜ್ ಚಂದ್ರಪಾಲ್, ಸೇವಾದಳದ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಪ್ರತಿಭಾ ಕುಳಾಯಿ, ಅಬ್ದುಲ್ ಲತೀಫ್, ಶುಭೋದಯ ಆಳ್ವ, ನವೀನ್ ಡಿಸೋಜಾ, ವಿಶ್ವಾಸ್ ದಾಸ್, ತೆರೆಸಾ ಪಿಂಟೋ, ಪದ್ಮನಾಭ ಅಮೀನ್, ಶೋಭಾ ಕೇಶವ್, ಟಿ.ಕೆ. ಸುಧೀರ್, ಜಯಶೀಲ ಅಡ್ಯಂತಾಯ, ಮುಹಮ್ಮದ್ ಕುಂಜತ್ತಬೈಲ್, ರಮಾನಂದ ಪೂಜಾರಿ, ಲ್ಯಾನ್ಸಿ ಲೋಟ್ ಪಿಂಟೋ, ಜೆಸಿಂತಾ ಆಲ್ಪ್ರೆಡ್, ಅಖಿಲ ಆಳ್ವ, ಶಬೀರ್ ಸಿದ್ಧಕಟ್ಟೆ, ಸಿ.ಎಂ. ಮುಸ್ತಫಾ, ಉದಯ ಕುಂದರ್, ಅನ್ಸಾರ್ ಸಾಲಿಮಾರ್, ನಮಿತಾ ಡಿ. ರಾವ್, ಭರತೇಶ್ ಅಮೀನ್, ಲಕ್ಷ್ಮೀ ನಾಯರ್, ಶೈಲಜಾ ಅಮರನಾಥ್ ಗೌಡ, ಯೋಗೀಶ್ ನಾಯಕ್, ಸಬಿತಾ ಮಿಸ್ಕಿತ್, ಸುಧಾಕರ್, ರಘುರಾಜ್ ದ್ರಿ ಇನ್ನಿತರರು ಉಪಸ್ಥಿತರಿದ್ದರು.

ಸದಾಶಿವ ಉಳ್ಳಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿರು. ಶಶಿಧರ ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News