ಸೀರತ್ ಅಭಿಯಾನ: ಪ್ರಬಂಧ ಸ್ಪರ್ಧೆ, ಮುಕ್ತ ಅವಕಾಶ

Update: 2020-10-31 13:59 GMT

ಮಂಗಳೂರು, ಅ.31: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ರಾಜ್ಯ ವ್ಯಾಪಿಯಾಗಿ ಆಚರಿಸಲ್ಪಡುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ವಿವಿಧ ವಿಭಾಗದವರಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ವಿಜೇತರಿಗೆ ತಲಾ 15 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ಪ್ರಥಮ), 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ದ್ವಿತೀಯ), 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ತೃತೀಯ) ಬಹುಮಾನವಾಗಿ ನೀಡಲಾಗುವುದು. ಅಲ್ಲದೇ ತೀರ್ಪುಗಾರರ ಮೆಚ್ಚುಗೆ ಪಡೆದ ಇತರ ಪ್ರಬಂಧಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಗುವುದು.

ವಿಭಾಗ-1ರಲ್ಲಿ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್‌ರ ಕೊಡುಗೆ’, ವಿಭಾಗ-2ರಲ್ಲಿ ನ್ಯಾಯವಾದಿಗಳು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ‘ಪ್ರವಾದಿ ಮುಹಮ್ಮದ್‌ರ ಸಾಮಾಜಿಕ ನ್ಯಾಯದ ಪರಿಕಲ್ಪನೆ’, ವಿಭಾಗ-3ರಲ್ಲಿ ಶಿಕ್ಷಕರು ಹಾಗೂ ಡಿ.ಎಡ್/ಬಿ.ಎಡ್/ಎಂ.ಎಡ್ ವಿದ್ಯಾರ್ಥಿಗಳಿಗೆ ‘ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್‌ರ ಕೊಡುಗೆ’ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಆಸಕ್ತರು ತಮ್ಮ ಬರಹಗಳನ್ನು ಫುಲ್ ಸ್ಕೇಪ್ ಬಿಳಿಹಾಳೆಯ ಒಂದೇ ಮಗ್ಗುಲಲ್ಲಿ ಎಂಟು ಪುಟಗಳಿಗೆ ಮೀರದಂತೆ ತಮ್ಮ ಅಧಿಕೃತ ದಾಖಲೆಗಳ ಪ್ರತಿಗಳೊಂದಿಗೆ ವಿಭಾಗವನ್ನು ನಮೂದಿಸಿ ಭಾವಚಿತ್ರದೊಂದಿಗೆ ಡಿ.10ರೊಳಗೆ ಪ್ರಬಂಧ ಸ್ಪರ್ಧಾ ಸಮಿತಿ, ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನ-, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು-575001 ವಿಳಾಸದಲ್ಲಿ ಕಳುಹಿಸಿ ಕೊಡಬೇಕು.

ಪ್ರಬಂಧ ಸ್ಪರ್ಧೆಯಲ್ಲಿ ಸರ್ವಧರ್ಮೀಯರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ, ಸ್ಪರ್ಧಾ ನಿಯಮಗಳ ಹೆಚ್ಚಿನ ಮಾಹಿತಿಗಳಿಗಾಗಿ 9448122361, 9845665198, 0824-2422786ನ್ನು ಸಂಪರ್ಕಿಸಲು ಪ್ರಕಟಣೆನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News