ನ. 1: ಕಸಾಪದಿಂದ ರಾಜ್ಯೋತ್ಸವ- ಕವಿಗೋಷ್ಠಿ

Update: 2020-10-31 14:00 GMT

ಮಂಗಳೂರು, ಅ.31: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಮಧ್ಯಾಹ್ನ 2:30ಕ್ಕೆ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಜಯಶ್ರೀ ಬಿ. ಕದ್ರಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಕವಿಗಳಾದ ಎಂ. ಕೃಷ್ಣ ಬರ್ವೆ, ಉಷಾ ಮಂದಾರ ಕಾಳೆ, ಡಾ. ಮಹೇಶ್ ಕೆ.ಕೆ., ಸ್ಮಿತಾ ಕಣಿಯೂರು, ಪ್ರವೀಣ್ ಬೈಕಂಪಾಡಿ, ಇಬ್ರಾಹಿಂ ಖಲೀಲ್ ಪುತ್ತೂರು, ಸತ್ಯನಾರಾಯಣ ಹಾಗೂ ಲಕ್ಷ್ಮೀ ಬಡಗಯೆಕ್ಕಾರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಇದೇ ಸಂದರ್ಭ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಅವರಿಗೆ ರಾಜ್ಯೋತ್ಸವ ಗೌರವ ಪ್ರದಾನ ಮಾಡಲಾಗುವುದು.

ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ಡೆಂಟಲ್ ಕಾಲೇಜಿನ ಸ್ಟೂಡೆಂಟ್ಸ್ ವೆಲ್ಫೇರ್ ಅಸೋಸಿಯೇಟ್ ಡೀನ್ ಡಾ.ಅಮರಶ್ರೀ ಅಮರನಾಥ ಶೆಟ್ಟಿ ದೀಪ ಪ್ರಜ್ವಲಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಕಾಸರಗೋಡು ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬದನಗದ್ದೆ ಮತ್ತು ಕಸಾಪಪ ಮಂಗಳೂರು ತಾಲೂಕು ಘಟಕಾ ಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಉಪಸ್ಥಿತರಿರುವರು ಎಂದು ಕಸಪಾ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News