ಮಂಗಳೂರು : ಅರಣ್ಯ ಅಧಿಕಾರಿ ವಿರುದ್ಧ ದೂರು ದಾಖಲು

Update: 2020-10-31 15:36 GMT

ಮಂಗಳೂರು, ಅ.31: ಕಂಕನಾಡಿಯ ಖಾಸಗಿ ಪ್ರೌಢಶಾಲೆಯೊಂದರ ಸಮೀಪದ ಬೃಹತ್ ಮರ ಕಡಿಯಲು ಅವೈಜ್ಞಾನಿಕವಾಗಿ ಅನುಮತಿ ಕೊಟ್ಟ ಆರೋಪದಲ್ಲಿ ಮಂಗಳೂರು ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ವಿರುದ್ಧ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಂಕನಾಡಿಯ ಖಾಸಗಿ ಪ್ರೌಢಶಾಲೆಯ ಬಳಿ ಸುಸ್ಥಿತಿಯಲ್ಲಿರುವ ಮರವೊಂದನ್ನು ಸಾರ್ವಜನಿಕ ಹಿತಾಸಕ್ತಿಯ ನೆಪದಲ್ಲಿ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಕೂಡಲೇ ತೆರವು ಕಾರ್ಯ ಸ್ಥಗಿತಗೊಳಿಸಬೇಕು. ಅವೈಜ್ಞಾನಿಕವಾಗಿ ಮರ ತೆರವಿಗೆ ಅನುಮತಿ ನೀಡಿದ ಎಸಿಎಫ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ ಇ ಸಿ ಎಫ್)  ದೂರಿನಲ್ಲಿ ತಿಳಿಸಿದೆ.
ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ದೂರು ದಾಖಲಾಗಿದೆ.

ತಾತ್ಕಾಲಿಕ ಸ್ಥಗಿತ: ‘ಕಂಕನಾಡಿಯ ಮರವನ್ನು ತೆರವುಗೊಳಿಸಲು ಅನುಮತಿಗಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ಈ ಮೊದಲೇ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮರ ಕಡಿಯಲು ಅನುಮತಿ ನೀಡಲಾಗಿದೆ. ಸದ್ಯ ಮರ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News