ಅಪ್ರಾಪ್ತೆಯ ಅಪಹರಣ: ಹಿರಿಯಡ್ಕ ಠಾಣಾ ಎದುರು ಪ್ರತಿಭಟನೆ

Update: 2020-10-31 15:23 GMT

ಉಡುಪಿ, ಅ.31: ಅಪಹರಣಕ್ಕೆ ಒಳಗಾಗಿರುವ ಬೆಳ್ಳಂಪಳ್ಳಿಯ ಅಪ್ರಾಪ್ತೆ ಯನ್ನು ತಕ್ಷಣ ಪತ್ತೆಹಚ್ಚಿಸ ಅಪಹರಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಮತ್ತು ಹಿಂದು ಜಾಗರಣ ವೇದಿಕೆ ಶನಿವಾರ ಹಿರಿಯಡ್ಕದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತು.

ಈ ಅಪಹರಣದ ಹಿಂದೆ ಲವ್ ಜಿಹಾದ್ ವ್ಯವಸ್ಥಿತ ಸಂಚು ನಡೆದಿರುವ ಅನುಮಾನವಿದೆ. ಆದುದರಿಂದ ಪೊಲೀಸರು ತನಿಖೆಯನ್ನು ತೀವ್ರ ಗೊಳಿಸಿ, ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಲಾಯಿತು. ಈ ಕುರಿತು ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಜೈಶಂಕ್ ಅವರಿಗೆ ಮನವಿ ಸಲ್ಲಿಸ ಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಸಿಸಿಟಿವಿ ಫುಟೇಜ್ ಈಗಾಗಲೇ ಲಭ್ಯವಾಗಿದ್ದು ಆರೋಪಿಯ ಚಲನವಲನಗಳ ಬಗ್ಗೆ ನಿಗಾ ಇರಿಸ ಲಾಗಿದೆ. ತಕ್ಷಣವೇ ಆರೋಪಿಯನ್ನು ಬಂಧಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಮಾತೃಶಕ್ತಿ ಪ್ರಮುಖರಾದ ಪೂರ್ಣಿಮಾ ಸುರೇಶ್, ಹಿಂಜಾವೇ ವಿಭಾಗ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ಗಿರೀಶ್ ಹಿರಿಯಡ್ಕ, ಅನಿಲ್ ಆತ್ರಾಡಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಪಾಧ್ಯಕ್ಷ ಯಶಪಾಲ ಸುವರ್ಣ, ಬಜರಂಗದಳದ ಪ್ರಮುಖರಾದ ಸುನೀಲ್ ಕೆ.ಆರ್. ಮೊದಲಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News