ಕಾರ್ಕಳದಲ್ಲಿ 'ಹಿರಿಯರೆಡೆಗೆ ನಮ್ಮ ನಡಿಗೆ' ಅಪೂರ್ವ ವ್ಯಕ್ತಿತ್ವದ ಎಂ.ಕೆ.ವಿ - ಡಾ.ಸಂತೋಷ್

Update: 2020-10-31 16:20 GMT

ಕಾರ್ಕಳ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಪರಿಶುದ್ಧ ಬದುಕನ್ನು ಬದುಕುತ್ತಿರುವ ಅಪೂರ್ವ ವ್ಯಕ್ತಿತ್ವ ಎಂ.ಕೆ.ವಿಜಯ ಕುಮಾರ್  ಅವರದ್ದಾಗಿದೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿರುವುದು ಹೆಮ್ಮೆಯ ಸಂಗತಿ ಎಂದು ಹಿರಿಯ ಸಾಮಾಜಿಕ ನೇತಾರ ಡಾ.ಸಂತೋಷ ಕುಮಾರ್ ಶೆಟ್ಟಿ ಹೇಳಿದರು.

ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತು ಅಜೆಕಾರು ಹೋಬಳಿ ಮತ್ತು ಆದಿಗ್ರಾಮೋತ್ಸವ ಸಮಿತಿಯು ಆಯೋಜಿಸಿದ್ದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ.ಕೆ.ವಿಜಯಕುಮರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಎಂ,.ಕೆ ಅವರ ನಿವಾಸ ಸುವೃತ ಸದನ ಸಾಧನೆ ನಮ್ಮ ಹಿರಿಯರ ಬಳುವಳಿಯಾಗಿದೆ. ಗೌರವವನ್ನು ಸಮಾಜಕ್ಕೆ ಸಮರ್ಪಿಸುತ್ತೇನೆ. ಹಿರಿಯ ವಕೀಲರಾದ ಎನ್.ಬಿ ಶೆಟ್ಟಿ ಅವರು ಅಂದು ನೀಡಿದ ಪ್ರೋತ್ಸಾಹ ಈ ವೃತ್ತಿಯಲ್ಲಿ ಸಾಧನೆ ಮಾಡಲು ಗಟ್ಟಿ ತಲಪಾಯ ಆಯಿತು ಎಂದು ಎಂ.ಕೆ. ವಿಜಯ ಕುಮರ್ ಹೇಳಿದರು.

ಸಮಿತಿಯ ರಾಜ್ಯಧ್ಯಕ್ಷ ಡಾ.ಶೇಖರ ಅಜೆಕಾರು ಎಂ.ಕೆ ಅವರಂತಹ ಹಿರಿಯರ ಪ್ರೋತ್ಸಾಹವೇ ವಿನೂತನ ಕಾರ್ಯಕ್ರಮಗಳ ಯಶಸ್ಸಿನ ಗುಟ್ಟು ಎಂದರು.

ಹಿರಿಯ ಶಿಕ್ಷಕ ಮೌರೀಸ್ ತಾವ್ರೋ ಅಜೆಕಾರು,  ರೋಟರಿ ಕ್ಲಬ್ ಕಾರ್ಕಳದ ನಿಕಟಪೂರ್ವ ಅಧ್ಯಕ್ಷ ಶೈಲೇಂದ್ರ ರಾವ್, ಕಾರ್ಕಳ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ ಜಗದೀಶ, ಸ್ವರ್ಣೋದ್ಯಮಿ ಕೆ.ಗೋಪಾಲ, ನ್ಯಾಯವಾದಿ ಸುವೃತ ಕುಮಾರ್,  ಪುರ ಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಅತಿಥಿಗಳಾಗಿದ್ದರು. ಸಮಿತಿಯ ಸದಸ್ಯ ಸಂತೋಷ್ ಜೈನ್ ಎಣ್ಣೆಹೊಳೆ, ಸುನಿಧಿ ಎಸ್. ಅಜೆಕಾರು, ಸುನಿಜ ಅಜೆಕಾರು, ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News