ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಪುಣ್ಯತಿಥಿ

Update: 2020-10-31 16:32 GMT

ಉಳ್ಳಾಲ : ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 36 ನೇ ವರ್ಷದ  ಪುಣ್ಯ ದಿನಾಚರಣೆ  ಉಳ್ಳಾಲ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಹಲವಾರು ದಿಟ್ಟ ನಿರ್ಧಾರಗಳಿಂದ ದೇಶವನ್ನು ಮುನ್ನೆಡಿಸಿದ ದೀರ ಮಹಿಳೆಯಾಗಿದ್ದಾರೆ ಇಂದಿರಾ ಗಾಂಧಿ ಎಂದರು.

ಇಂದಿರಾ ಗಾಂಧಿ ಕಾಲದಲ್ಲಿ ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ.ಇವರ ಕಾಲದಲ್ಲಿ ಗೇಣಿದಾರರ, ರೈತರ ಸ್ಥಿತಿ ಶೋಚನೀಯವಾಗಿತ್ತು.ಈ ಸಮಸ್ಯೆ ಗಳಿಗೆ ಪರಿಹಾರ ಒದಗಿಸಿ ಕೊಟ್ಟ ಧೀರ ಮಹಿಳೆ ಇಂದಿರಾ ಗಾಂಧಿ ಆಗಿದ್ದರು  ಎಂದು ಇಬ್ರಾಹಿಂ ಕೋಡಿಜಾಲ್  ದಿಕ್ಸೂಚಿ ಬಾಷಣ ಮಾಡಿದರು .

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ   ಸುರೇಶ್ ಬಟ್ನಗರ ವಂದಿಸಿದರು.

 ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ  ಎನ್ ಎಸ್ ಕರೀಂ, ಉಳ್ಳಾಲ ಬ್ಲಾಕ್  ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಉಳ್ಳಾಲ, ಜಿಲ್ಲಾ ಕಾಂಗ್ರೆಸ್ ವೀಕ್ಷಕಿ ಮಲ್ಲಿಕಾ ಪಕ್ಕಳ,  ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರ ಹಾಸ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷೆ ಆಲ್ವಿನ್ ಡಿಸೋಜ, ಕ್ಷೇತ್ರ ಇಂಟಕ್ ಅಧ್ಯಕ್ಷ ಹರೀಶ್ ರಾವ್, ಉಳ್ಳಾಲ ನಗರ ಸಭೆ ಸದಸ್ಯರಾದ ಮುಹಮ್ಮದ್ ಮುಕಚೇರಿ, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಪುರುಷೋತ್ತಮ ಅಂಚನ್, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಸಾಮಾನಿಗೆ,  ಕಾಂಗ್ರೆಸ್ ಪ್ರಮುಖರಾದ ಝಕಾರಿಯ ಮಲಾರ್, ಅಬೂಸಾಲಿ ಕಿನ್ಯ, ಮನ್ಸೂರ್ ಉಳ್ಳಾಲ್, ಕಿಶೋರ್ ಗಟ್ಟಿ, ಪದ್ಮನಾಭ ಉಳ್ಳಾಲ್, ಪುರುಷೋತ್ತಮ್ ಶೆಟ್ಟಿ ಪಿಲಾರ್, ತಾ.ಪ.ಸದಸ್ಯೆ ಶ್ರೀಮತಿ ವಿಲ್ಮಾ ಡಿಸೋಜ, ರಝಿಯಾ ಇಬ್ರಾಹಿಮ್, ಆಯಿಶಾ ಮಿನಾಝ್, ಚಿತ್ರಕಲ, ಸತ್ತಾರ್ ಹರೇಕಳ, ರಿಚರ್ಡ್ ಡಿಸೋಜ, ಸಿದ್ದೀಕ್ ಇಂಟಕ್, ಐರಿನ್ ಡಿಸೋಜ, ವಿಶ್ವನಾಥ್ ಪೂಜಾರಿ ಹರೇಕಳ, ಮಹಮ್ಮದ್ ಅಡ್ಕರೆ, ಶಶಿಕಲಾ, ಜೆಸಿಂತ ಕೋಟೆಕಾರ್, ರವಿ ಕಾಪಿಕಾಡ್, ಇಸ್ಮಾಯಿಲ್ ಉಳ್ಳಾಲ್, ಯಾಕೂಬ್ ಪಿಲಿಕೂರು, ಸಲಾಂ ತಲಪಾಡಿ, ಹಮೀದ್ ಕಿನ್ಯ , ರಾಜೇಂದ್ರ ಭಂಡಸಾಲೆ, ಶೋಭ ಕೊಣಾಜೆ, ಸೀತಾ ನಾಯಕ್, ಮುನೀರ್ ಇಂಟಕ್,  ವಿಶಾಲ್, ಸಾಮಾಜಿಕ ಜಾಲತಾಣದ ಸಂಘಟಕ ರಾಬಿನ್ ಪ್ರೀತಂ, ಮಹಮ್ಮದ್ ಅಸೈ, ನವೀನ್ ಡಿಸೋಜ, ಲತಾ ತಲಪಾಡಿ, ದೇವಣ್ಣ ಶೆಟ್ಟಿ, ವಿವೇಕ್ ರೈ, ಪ್ರಭಾಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News