ಮೆಕ್ಯಾನಿಕ್ ನಾಪತ್ತೆ

Update: 2020-10-31 16:56 GMT

ಮಂಗಳೂರು, ಅ.31: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಮೆಕ್ಯಾನಿಕ್‌ವೊಬ್ಬರು ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಿಯಾಲ್‌ಬೈಲ್ ನಿವಾಸಿ ಸನತ್‌ ಕುಮಾರ್ ಆಚಾರ್ಯ (28) ನಾಪತ್ತೆಯಾದವರು. ಅ.20ರಂದು ಬೆಳಗ್ಗೆ 8 ಗಂಟೆಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಸಂಜೆ 6 ಗಂಟೆಗೆ ಕರೆ ಮಾಡಿದಾಗ ಪ್ರತಿಕ್ರಿಯಿಸಿರಲಿಲ್ಲ. ಆದರೆ ಸಂಜೆ 6:30ರ ಸುಮಾರಿಗೆ ಇನ್ನೂ ಕೆಲಸ ಇದೆ ಎಂದು ಮೆಸೆಜ್ ಮಾಡಿದ್ದರು. ಬಳಿಕ ಆತನ ಫೋನ್ ಸ್ವಿಚ್‌ ಆಫ್ ಆಗಿದೆ. ನೆರೆಹೊರೆ ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ: 5.5 ಅಡಿ ಎತ್ತರ, ಗೋಧಿ ಮೈಬಣ್ಣ, ನೀಳ ಮುಖ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಮೆರೂನ್ ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದರು. ಕನ್ನಡ, ತುಳು ಮಾತನಾಡುತ್ತಾರೆ.

ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಬರ್ಕೆ ಪೊಲೀಸ್ ಠಾಣೆ (0824-2220522) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News