ಮಹರ್ಷಿ ವಾಲ್ಮೀಕಿ ಜಯಂತಿ ; ಭಾರತವು ವಿಶ್ವಕ್ಕೆ ಬೆಳಕು: ಸಂಸದ ಕಟೀಲ್

Update: 2020-10-31 17:01 GMT

ಮಂಗಳೂರು, ಅ.31: ವ್ಯಕ್ತಿ ಮತ್ತು ಪ್ರಕೃತಿ ಎರಡರಲ್ಲಿ ದೇವರನ್ನು ಕಂಡಿರುವ ದೇಶ ನಮ್ಮದು. ಭಾರತವು ವಿಶ್ವಕ್ಕೆ ಅಧ್ಯಾತ್ಮದ ಬೆಳಕು ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಶನಿವಾರ ಆಯೋಜಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಾಣದ ಮೂಲಕ ಅಧ್ಯಾತ್ಮವನ್ನು ಪ್ರಪಂಚಕ್ಕೆ ಸಾರಿದ ಮಹಾನ್ ಜ್ಞಾನಿಯೇ ಮಹರ್ಷಿ ವಾಲ್ಮೀಕಿ. ನಿತ್ಯದ ಜೀವನದಲ್ಲಿ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆಯಬೇಕು. ಅವರ ಆದರ್ಶಗಳಿಂದ ಸ್ಫೂರ್ತಿ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ರಾಮಾಯಣವನ್ನು ಧಾರ್ಮಿಕ ಗ್ರಂಥವಾಗಿ ನೋಡದೇ ಅದರಲ್ಲಿನ ಅಂಶಗಳನ್ನು ಜೀವನದಲ್ಲಿ ಆದರ್ಶವಾಗಿ ಪಾಲಿಸಿಕೊಂಡು ಮುಂದೆ ಸಾಗಬೇಕು. ಮನಸ್ಸಿನಲ್ಲಿ ಬದಲಾವಣೆ ಮಾಡಿಕೊಂಡಿರೆ ಎಂತಹ ಮಹಾ ಕಾವ್ಯಗಳನ್ನು ಕೂಡ ರಚಿಸಬಹುದು ಎನ್ನುವುದನ್ನು ವಾಲ್ಮಿಕಿ ತೋರಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ವೈ. ಶೆಟ್ಟಿ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News