ಕ್ವಾ. ಫೈನಲ್‌ನಲ್ಲಿ ನಿರ್ಗಮಿಸಿದ ಜೊಕೊವಿಕ್

Update: 2020-10-31 18:40 GMT

 ವೆಯೆನ್ನಾ, ಅ.31: ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ವಿಯೆನ್ನಾ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ.

ನೊವಾಕ್ ಜೊಕೊವಿಕ್ ಈ ವರ್ಷ ಮೂರನೇ ಬಾರಿಗೆ ಸೋಲು ಅನುಭವಿಸಿದ್ದಾರೆ.

ಅಗ್ರ ಶ್ರೇಯಾಂಕಿತ ಜೊಕೊವಿಕ್ 2-6, 1-6 ಅಂತರದಲ್ಲಿ ಇಟಲಿಯ 42ನೇ ಶ್ರೇಯಾಂಕದ ಲೊರೆಂಜೊ ಸೋನೆಗೊ ಅವರ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಸೋಲು ಅನುಭವಿಸಿದರು.

‘‘ನಾನು ಹೆಚ್ಚು ಅಂಕಗಳನ್ನು ಗಳಿಸಲು ಮತ್ತು ವರ್ಷದ ಕೊನೆಯಲ್ಲಿ ನಂ.1 ಸ್ಥಾನವನ್ನು ಗಳಿಸುವ ಪ್ರಯತ್ನದಲ್ಲಿ ಇಲ್ಲಿಗೆ ಬಂದಿದ್ದೇನೆ. ನಾನು ಅದನ್ನು ಮಾಡಿದ್ದೇನೆ. ಹಾಗಾಗಿ ನಾನು ಮುಂದುವರಿಯುತ್ತೇನೆ ಎಂದು’’ ಜೊಕೊವಿಕ್ ಹೇಳಿದರು. ಜೊಕೊವಿಕ್ ಅವರು ರಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ಮತ್ತೆ ವರ್ಷಾಂತ್ಯದಲ್ಲಿ ನಂ .1 ಸ್ಥಾನ ಪಡೆಯುವ ನಿರೀಕ್ಷೆಯಿದೆ, ಆದರೆ ರವಿವಾರ ವಿಯೆನ್ನಾ ಒಳಾಂಗಣ ಹಾರ್ಡ್-ಕೋರ್ಟ್ ಫೈನಲ್‌ನಲ್ಲಿ ಜಯಗಳಿಸಿದ್ದರೆ ಅವರಿಗೆ ನಂ.1 ಸ್ಥಾನ ಪಡೆಯಲು ಸುಲಭವಾಗುತ್ತಿತ್ತು

ಈ ವರ್ಷ ಈಗಾಗಲೇ ಜೊಕೊವಿಕ್ ಎರಡು ಟೂರ್ನಿಗಳಲ್ಲಿ ಸೋಲು ಅನುಭವಿಸಿದ್ದಾರೆ. ಯು.ಎಸ್. ಓಪನ್ ನಾಲ್ಕನೇ ಸುತ್ತಿನಲ್ಲಿ ಲೈನ್ ರೆಫರಿಗೆ ಚೆಂಡಿನಿಂದ ಹೊಡೆದಿದ್ದಕ್ಕಾಗಿ ಕೂಟದಿಂದ ಅನರ್ಹಗೊಂಡಿದ್ದರು. ಫ್ರೆಂಚ್ ಓಪನ್ ಫೈನಲ್‌ನಲ್ಲಿ ನಡಾಲ್ ವಿರುದ್ಧ ಸೋತು ನಿರ್ಗಮಿಸಿದ್ದರು.

5ನೇ ಶ್ರೇಯಾಂಕದ ರುಬ್ಲೆವ್ ಸೆಮಿಫೈನಲ್ ತಲುಪಿದ್ದಾರೆ. ಅವರು ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್ ಅವರನ್ನು 7-6 (5), 6-2 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ಅವರು ಈ ವರ್ಷ ಐದನೇಯ ಎಟಿಪಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ 2018ರ ಚಾಂಪಿಯನ್ ಕೆವಿನ್ ಆ್ಯಂಡರ್ಸನ್ ಸವಾಲನ್ನು ಎದುರಿಸಬೇಕಾಗಿದೆ. ಆ್ಯಂಡರ್ಸನ್ ಅವರು ಡೇನಿಯಲ್ ಮೆಡ್ವೆದೇವ್ ವಿರುದ್ಧ 6-4, 7-6 (5) ಸೆಟ್‌ಗಳಿಂದ ಜಯ ಗಳಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News