ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿಗೆ ಒಂದು ದಿನ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ತಡೆ

Update: 2020-11-01 07:17 GMT

ಹೊಸದಿಲ್ಲಿ: ಮಾದರಿನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಮಧ್ಯಪ್ರದೇಶದ ಸಚಿವೆ ಇಮಾರ್ತಿ ದೇವಿ ನವೆಂಬರ್ 1 ರಂದು ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ತಡೆಯೊಡ್ಡಿದೆ.

ನವೆಂಬರ್ 3ರಂದು ಮಧ್ಯಪ್ರದೇಶದ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯ ಪ್ರಚಾರ ಕಾರ್ಯವು ನವೆಂಬರ್ 1 ಸಂಜೆಗೆ ಕೊನೆಯಾಗಲಿದೆ

ಎದುರಾಳಿ ರಾಜಕೀಯ ಪ್ರತಿಸ್ಪರ್ಧಿಯನ್ನು ಹುಚ್ಚ ಎಂದು ಕರೆದಿದ್ದ ಇಮಾರ್ತಿ ದೇವಿ ಎದುರಾಳಿ ಪಕ್ಷದ ಕುಟುಂಬದ ಮಹಿಳಾ ಸದಸ್ಯರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗವು ಮಂಗಳವಾರ ಇಮಾರ್ತಿ ದೇವಿಗೆ ನೋಟಿಸ್ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News