×
Ad

ಕಾಂಗ್ರೆಸ್ ಗೆ ಮತ ಯಾಚಿಸಿದ ಜ್ಯೋತಿರಾದಿತ್ಯ ಸಿಂಧಿಯಾ: ವೀಡಿಯೊ ಟ್ರೋಲ್

Update: 2020-11-01 11:45 IST

ಹೊಸದಿಲ್ಲಿ: ಕಾಂಗ್ರೆಸ್ ನಾಯಕರು ನನ್ನನ್ನು ನಾಯಿ ಎಂದು ಕರೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದ ಅಭ್ಯರ್ಥಿ ಇಮಾರ್ತಿ ದೇವಿ ಪರ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಗೆ ಮತಯಾಚಿಸಿ ಮುಜುಗರಕ್ಕೊಳಗಾದರು. ಸಿಂಧಿಯಾ ಕಾಂಗ್ರೆಸ್ ಗೆ ಮತ ಯಾಚಿಸುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.

3ನೇ ತಾರೀಖಿನಂದು ಕೈ ಗುರುತಿನ ಚಿಹ್ನೆಯ ಬಟನ್ ಒತ್ತಿ ಕಾಂಗ್ರೆಸ್ ಗೆ ಮತ ಹಾಕುತ್ತೇವೆಂದು ಮುಷ್ಠಿ ಹಿಡಿದುಕೊಂಡು ನನಗೆ ಭರವಸೆ ನೀಡಿ ಎಂದು ಸಿಂಧಿಯಾ ಭಾಷಣದಲ್ಲಿ ಹೇಳಿದ್ದಾರೆ.

ನವೆಂಬರ್ 3 ರಂದು ಮಧ್ಯಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆಗೆ ಮೊದಲು ಬಿಜೆಪಿಯ ಪರ ಸಿಂಧಿಯಾ ದಾಬ್ರಾದಲ್ಲಿ ಶನಿವಾರ ಪ್ರಚಾರ ನಡೆಸಿದರು.

ಸಿಂಧಿಯಾ ಬಾಯ್ತಪ್ಪಿನಿಂದ ಬಿಜೆಪಿಯ ಬದಲಿಗೆ ಕಾಂಗ್ರೆಸ್ ಗೆ ಮತಯಾಚಿಸಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News