ಕಲಾಬಾಗಿಲು : ಬುರೂಜ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Update: 2020-11-01 13:13 IST
ಬಂಟ್ವಾಳ, ನ.1 ಇಲ್ಲಿನ ರಝಾ ನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.
ಶಾಲೆಯ ಸಂಚಾಲಕ ಶೇಕ್ ರಹ್ಮತುಲ್ಲಾ ಧ್ವಜಾರೋಹಣಗೈದು ಮಾತನಾಡಿದರು.
ಶಾಲಾ ಶಿಕ್ಷಕರಾದ ಚೇತನಾ ಬಿ. ಜೈನ್, ಅನ್ನಪೂರ್ಣೇಶ್ವರಿ, ಮಮತಾ, ನೂರ್ ಜಹಾನ್, ಹರಿಣಾಕ್ಷಿ, ಮಹಮ್ಮದ್ ಆದಿಲ್ ಶೇಕ್, ಮುಹಮ್ಮದ್ ದ್ಯಾನಿಶ್ ಮೊದಲಾದವರು ಉಪಸ್ಥಿತರಿದ್ದರು.
ಶೇಕ್ ಸಾದಿಯಾ ಸ್ವಾಗತಿಸಿದರು. ವಿಶಾಲ್ ಸಾಲ್ಯಾನ್ ವಂದಿಸಿದರು.