ಕುಪ್ಪೆಪದವು: ಮೀಲಾದ್ ಜಲ್ಸಾ ಕಾರ್ಯಕ್ರಮ
ಮಂಗಳೂರು, ನ.1: ಕುಪ್ಪೆಪದವು ಬದ್ರಿಯಾ ಜುಮಾ ಮಸ್ಜಿದ್ ವತಿಯಿಂದ ಮೀಲಾದ್ ಜಲ್ಸಾ ಕಾರ್ಯಕ್ರಮ ಗುರುವಾರ ನಡೆಯಿತು
ಧ್ವಜಾರೋಹಣ, ಪ್ರವಾದಿ ಸಂದೇಶ, ಮೌಲೂದ್ ಪಾರಾಯಣ, ಮೀಲಾದ್ ಕ್ವಿಝ್ ಕ್ಯಾಂಪೇನ್‌ನ ಫಲಿತಾಂಶ ಪ್ರಕಟ, ಮೀಲಾದುನ್ನಬಿ ಸಂಶಯ ನಿವಾರಣೆ ಕೃತಿ ಬಿಡುಗಡೆ ಹಾಗೂ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು.
ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಎ.ಉಮರಬ್ಬ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಸೀದಿ ಖತೀಬ್ ಅಬೂ ಝೈದ್ ಶಾಫಿ ಮದನಿ ಕರಾಯ ಉದ್ಘಾಟಿಸಿದರು.
ಸಹಾಯಕ ಇಮಾಮ್ ಉಮರುಲ್ ಫಾರೂಕ್ ಸಖಾಫಿ ಅಲ್ ಹಿಮಮಿ ಪೆರಾಳ, ಬಶೀರ್ ಮುಸ್ಲಿಯಾರ್ ಆಚರಿಜೋರ, ಬಶೀರ್ ಮುಸ್ಲಿಯಾರ್ ಕೋರ್ಡೆಲ್ , ಅಝ್‌ಹರಿ ಉಸ್ತಾದ್ ಪದರಂಗಿ ,ಅಬ್ದುಲ್ಲಾ ಉಸ್ತಾದ್ ಕೈಕಂಬ, ಸ್ವದಕತುಲ್ಲಾಹ್ ಮದನಿ ಕುದ್ದೊಟ್ಟು, ರಝಾಕ್ ಮುಸ್ಲಿಯಾರ್, ಆಡಳಿತ ಸಮಿತಿ ಉಪಾಧ್ಯಕ್ಷ ಹಾಜಿ ಅಬ್ದುರ್ರಝಾಖ್ ಬ್ಲೂಸ್ಟಾರ್, ಪ್ರಧಾನ ಕಾರ್ಯದರ್ಶಿ ರಫೀಕ್ ಆಚರಿಜೋರ, ಕೋಶಾಧಿಕಾರಿ ಉಸ್ಮಾನ್ ಮುರ, ಆಡಳಿತ ಸಮಿತಿಯ ಸದಸ್ಯರಾದ ಇಬ್ರಾಹೀಂ ಹಾಜಿ, ಮುಹಮ್ಮದ್ ಶರೀಫ್ ಕಜೆ, ಅಬ್ದುರ್ರಝಾಕ್ ಪದವಿನಂಗಡಿ, ಅಬೂಬಕರ್ ಪಡಿಲ್‌ಪದವು, ಅಬ್ದುಲ್ಲತೀಫ್ ಆಚರಿಜೋರ, ಇಸ್ಮಾಯೀಲ್ ಶರೀಫ್, ಮಸ್ಜಿದ್ ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ದರ್ಖಾಸ್, ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮದನಿ, ಡಿ.ಪಿ.ಹಮ್ಮಬ್ಬ, ಅಬ್ದುರ್ರಹ್ಮಾನ್ ಹಾಜಿ ನಡುಪಲ್ಲ, ಯೂಸುಫ್ ಹಾಜಿ, ಸಲೀಂ ಹಾಜಿ, ಮಾಜಿ ಪ್ರಧಾನ ಕಾರ್ಯದರ್ಶಿ ಯಾಕೂಬ್, ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಗೆ ಒಳಪಟ್ಟ ಆಚರಿಜೋರ, ಪಡರಂಗಿ ಕೋರ್ಡೆಲ್ ಮೊಹಲ್ಲಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಜಮಾಅತ್ ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಫೀಖ್ ಆಚರಿಜೋರ ಸ್ವಾಗತಿಸಿದರು. ಇಸ್ಮಾಯೀಲ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.