×
Ad

ಐಪಿಎಲ್2020: ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದ ಧೋನಿ ಪಡೆ: ಸೋತು ಹೊರಬಿದ್ದ ಪಂಜಾಬ್

Update: 2020-11-01 19:33 IST

ಅಬುಧಾಬಿ: ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಗುಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಕೊನೆಯ ಪಂದದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯಗಳಿಸುವ ಮೂಲಕ ಐಪಿಎಲ್2020ಯ ಅಭಿಯಾನ ಕೊನೆಗೊಳಿಸಿದ್ದು, ಸೋತ ಪಂಜಾಬ್ ತಂಡವು ಪ್ಲೇಆಫ್ ನಿಂದ ಹೊರಬಿದ್ದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 153 ರನ್ ಗಳಿಸಿತ್ತು. ದೀಪಕ್ ಹೂಡಾ 62( 30 ಎಸೆತ) ರಾಹುಲ್ 29, ಅಗರವಾಲ್ 26 ರನ್ ಗಳಿಸಿದರು.

ಚೆನ್ನೈ ಪರ ಲುಂಗಿ ಗಿಡಿ 3 ವಿಕೆಟ್ ಕಬಳಿಸಿದರು.

154 ರನ್ ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.5 ಓವರ್ ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ತಲುಪಿತು. ರುತುರಾಜ್ ಗಾಯಕ್ವಾಡ್ ಸತತ ಮೂರನೇ ಅರ್ಧಶತಕದೊಂದಿಗೆ ತಂಡಕ್ಕೆ ಆಸರೆಯಾದರು. 49 ಎಸೆತಗಳಲ್ಲಿ 62 ರನ್ ಬಾರಿಸಿದ ಅವರು ಔಟಾಗದೇ ಉಳಿದರು. ಉಳಿದಂತೆ ಡುಪ್ಲೆಸಿಸ್ 48 ಹಾಗೂ ರಾಯುಡು 30 ರನ್ ಗಳಿಸಿದರು.

13 ಪಂದ್ಯಗಳಿಂದ 6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಪಂಜಾಬ್ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಆದರೆ ಹೀನಾಯವಾಗಿ ಸೋಲುವ ಮೂಲಕ ಪ್ಲೇಆಫ್ ಕನಸನ್ನು ಭಗ್ನಗೊಳಿಸಿದೆ. ಚೆನ್ನೈ ತನ್ನ ಅಂತಿಮ ಪಂದ್ಯದಲ್ಲಿ ಜಯಗಳಿಸುವ ಮೂಲಕ 6ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News