×
Ad

ದ್ವಿಶತಕ ಮಾನಸಿಕ ಆರೋಗ್ಯ ಶಿಬಿರ ಸಂಪನ್ನ: ಡಾ.ಪಿ.ವಿ.ಭಂಡಾರಿ ಡಾ.ಶ್ರೀನಿವಾಸ ಭಟ್‌ಗೆ ಸನ್ಮಾನ

Update: 2020-11-01 19:37 IST

ಶಿರ್ವ, ನ.1: ಕಳೆದ 17 ವರ್ಷಗಳಿಂದ ಶಂಕರಪುರ ರೋಟರಿ ಕ್ಲಬ್ ಮತ್ತು ರೋಟರಿ ಟ್ರಸ್ಟ್ ವತಿಯಿಂದ ಶಂಕರಪುರ ರೋಟರಿ ಭವನದಲ್ಲಿ ನಡೆಸಲಾಗುತ್ತಿ ರುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರದ 200ನೆ ಮಾಸಿಕ ಶಿಬಿರದ ಉದ್ಘಾಟನೆಯನ್ನು ಮುಂಬಯಿ ದಹಿಸರ್‌ನ ಸಂತ ಲೂವಿಸ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ರೆ.ಫಾ.ರೊನಾಲ್ಡ್ ಫೆರ್ನಾಂಡಿಸ್ ರವಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಶಿಬಿರದ ಮೂಲಕ ಮಾನಸಿಕ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಮೂಲಕ ಹಲವು ಕುಟುಂಬಗಳಲ್ಲಿ ಹಾಗೂ ಅವರ ನೆರೆಕರೆಗಳಲ್ಲಿ ನೆಮ್ಮದಿಯ ಶಾಂತಿಯ ಬದುಕು ನೀಡಲು ಸಾಧ್ಯವಾಗಿದೆ. ಪ್ರತಿಯೊಂದು ಕಾರ್ಯದಲ್ಲೂ ದೇವರನ್ನು ಕಾಣುವ ಅವಕಾಶವೇ ಇಂತಹ ಸೇವೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಬಿರದ ವೈದ್ಯಾಧಿಕಾರಿಗಳಾದ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಹಾಗೂ ಮಂಗಳೂರು ಕ್ಷೇಮ ಆಸ್ಪತ್ರೆಯ ಮನೋವೈದ್ಯ ಡಾ.ಶ್ರೀನಿವಾಸ ಭಟ್ ಉಂಡಾರು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ..ಪಿ.ವಿ.ಭಂಡಾರಿ ಮಾತನಾಡಿ, ಮೂಢನಂಬಿಕೆಗಳನ್ನು ಮೆಟ್ಟಿ ನಿಂತು, ವೈಜ್ಞಾನಿಕ ಮನೋಭಾವನೆಯನ್ನು ಸಮುದಾಯದಲ್ಲಿ ಜಾಗೃತಿ ಮೂಡಿ ಸುವ ವಿಶಿಷ್ಟ ಕ್ಯಾಂಪ್ ಈ ಉಚಿತ ಮಾನಸಿಕ ರೋಗ ತಪಾಸಣಾ ಶಿಬಿರ ವಾಗಿದೆ ಎಂದರು.

ಡಾ.ಶ್ರೀನಿವಾಸ ಭಟ್ ಮಾತನಾಡಿ, ದೇಶದಲ್ಲಿ 40 ಕೋಟಿಗೂ ಅಧಿಕ ಮಾನಸಿಕ ರೋಗಿಗಳಿದ್ದು, ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರ ವಾಗಿ ನಡೆಯಬೇಕು. ಕೀಳರಿಮೆ ಇಲ್ಲದೆ ಚಿಕಿತ್ಸೆ ಪಡೆದುಕೊಂಡಾಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಬಿಳಿಯಾರು ಪದ್ಮನಾಭ ಭಟ್, ರೋಟರಿ ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರಪುರ ಶುಭ ಹಾರೈಸಿದರು. ಶಿಬಿರಾರ್ಥಿಗಳ ಪರವಾಗಿ ಹರಿಶ್ಚಂದ್ರ ಆಚಾರ್, ಕ್ಲಾರಾ ಮಚಾದೋ ಮಾತನಾಡಿದರು. ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ವಹಿಸಿದ್ದರು. ಕಾರ್ಯದರ್ಶಿ ಜೆರೋಮ್ ರೊಡ್ರಿಗಸ್ ವಂದಿಸಿದರು. ಅನಿಲ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News