×
Ad

ಪಡುಬಿದ್ರೆ: ‘ಸತ್ತಕೊನೆ’ ಕಿರುಚಿತ್ರ ಬಿಡುಗಡೆ

Update: 2020-11-01 19:38 IST

 ಉಡುಪಿ, ನ.1: ಗ್ಲಾಮರ್ ವ್ಯೆವ್ ಪ್ರೊಡಕ್ಷನ್ಸ್ ಮತ್ತು ಐನ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ‘ಸತ್ತಕೊನೆ’ ಕಿರುಚಿತ್ರ ಮಂಗಳೂರು ಮಿರರ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಂಡಿದೆ.

ಪಡುಬಿದ್ರೆಯಲ್ಲಿರುವ ಸಂಸ್ಥೆಯ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಫಾರ್ಚೂನ್ ಸೇಫ್ಟೀ ಗ್ಲಾಸ್ ಸಂಸ್ಥೆಯ ಸುರೇಶ್ ನಾಯ್ಕ್ ಚಿತ್ರವನ್ನು ಬಿಡು ಗಡೆಗೊಳಿಸಿದರು. ಈ ಕಿರುಚಿತ್ರ ಕ್ಲಬ್ಬಿ ಆನ್‌ಲೈನ್ ಮಿನಿ ಮೂವಿ ಫೆಸ್ಟಿವಲ್, ಕೋಲ್ಹಾಪುರ್ ಫಿಲ್ಮ್ ಫೆಸ್ಟಿವಲ್ ಹಾಗೂ ಡಿ.ಡಿ. ಚಂದನದಲ್ಲಿ ಪ್ರದರ್ಶನ ಕಂಡಿದೆ. ರಾಜ್ಯ ಸರಕಾರದ ಕಿರುಚಿತ್ರ ಪ್ರಶಸ್ತಿಯಲ್ಲಿ ಭಾಗವಹಿಸಲು ಆಯ್ಕೆ ಯಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಕಿರುಚಿತ್ರದ ನಾಯಕಿ ಶೈಲಶ್ರೀ ಮುಲ್ಕಿ, ಚಿತ್ರ ನಿರ್ದೇಶಕ ಯಶ ರಾಜ್, ಡಿ.ಒ.ಪಿ ಹಾಗೂ ಸಂಕಲನಕಾರ ಹರ್ಷಿತ್ ಬಲ್ಲಾಳ್, ಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಸಂದೇಶ್ ಬಿಜೈ, ಸಮನಾ ಸುರೇಶ್, ಧನುಷ, ದಿಶಾ, ಲಕ್ಷ್ಮಣ್ ಬಿ.ಅಮಿನ್, ಕರುಣಾಕರ್, ರಮೇಶ್ ಸುವರ್ಣ, ಅಶೋಕ್ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News