×
Ad

'ನಮೋ ಎಗೈನ್' ಟೀ ಶರ್ಟ್ ಧರಿಸಿದ್ದ ಕಳ್ಳನ ಫೋಟೊ ಟ್ವಿಟ್ಟರ್ ನಿಂದ ಅಳಿಸಿದ ಗಾಝಿಯಾಬಾದ್ ಪೊಲೀಸ್

Update: 2020-11-01 21:11 IST

ಹೊಸದಿಲ್ಲಿ: ಯೂತ್ ಕಾಂಗ್ರೆಸ್ ಮುಖಂಡ ಬಿ.ವಿ. ಶ್ರೀನಿವಾಸ್ ಟ್ವಿಟ್ಟರ್ ನಲ್ಲಿ ತಮಾಷೆ ಮಾಡಿದ ಬಳಿಕ ಗಾಝಿಯಾಬಾದ್ ಪೊಲೀಸರು 'ನಮೋ ಎಗೈನ್' ಎಂದು ಬರೆದಿದ್ದ ಟೀ ಶರ್ಟ್ ಧರಿಸಿದಾತನು ಸಹಿತ ನಾಲ್ವರು ಬಂಧಿತ ಕಳ್ಳರ ಫೋಟೊ ಇದ್ದ  ಟ್ವೀಟನ್ನು ಅಳಿಸಿ ಹಾಕಿದ್ದಾರೆ.

ನಾಲ್ವರು ಕಳ್ಳರ ಫೋಟೊಗಳನ್ನು ಹಂಚಿಕೊಂಡಿದ್ದ ಗಾಝಿಯಾಬಾದ್ ಪೊಲೀಸರು, ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ, “ಲೋನಿ ಬಾರ್ಡರ್ ಪೊಲೀಸರು ಅಂಗಡಿಯೊಂದರಲ್ಲಿ ನಡೆದಿರುವ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು, ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ.  ಅವರಿಂದ 14 ಕದ್ದ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಟ್ವೀಟಿಸಿದ್ದರು.

ಇದೇ ವೇಳೆ, ಈ ಟ್ವೀಟ್ ಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರನ್ನು ತಮಾಷೆ ಮಾಡಿದ ಯುವ ಕಾಂಗ್ರೆಸ್ ನಾಯಕ ಬಿ.ವಿ. ಶ್ರೀನಿವಾಸ್ ,ಗಾಝಿಯಾಬಾದ್ ಪೊಲೀಸರು ಬಂಧಿಸಿರುವ ಕಳ್ಳನನ್ನು ಆತ ಧರಿಸಿರುವ ಬಟ್ಟೆಯಲ್ಲೇ ಗುರುತಿಸಬಹುದು. ಅಂಧ ಅನುಯಾಯಿಗಳಿಗೆ ಈ ಉದ್ಯೋಗ ಮಾತ್ರವೇ ಉಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಬೆಂಬಲಿಗರು “ನಮೋ ಎಗೈನ್’ ಹ್ಯಾಷ್ ಟ್ಯಾಗ್ ನೊಂದಿಗೆ ಭಾರೀ ಅಭಿಯಾನ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News