ಶಕ್ತಿ ಶಾಲೆಯಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆ
Update: 2020-11-01 21:51 IST
ಮಂಗಳೂರು, ನ.1: ‘ಉಕ್ಕಿನ ಮನುಷ್ಯ’ ಎಂದು ಕರೆಯಲ್ಪಡುವ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜನ್ಮದಿನ ಸ್ಮರಿಸಲು ರಾಷ್ಟ್ರೀಯ ಐಕ್ಯತಾ ದಿನ ಆಚರಿಸಲಾಗುತ್ತಿದ್ದು,ಶಕ್ತಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆಯನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ದೇಶದಲ್ಲಿ ಐಕ್ಯತೆಯನ್ನು ಸಾಧಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಸಾಧನೆಯ ಚಿತ್ರೀಕರಣವನ್ನು ಬಿತ್ತರಿಸಲಾಯಿತು. ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರದ್ಯುತ್ ಪ್ರಾರ್ಥಿಸಿದರು. ಜಿಶೃತ ಹೆಗ್ಡೆ ಐಕ್ಯತಾ ದಿನದ ಮಹತ್ವವನ್ನು ತಿಳಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರು ವಿದ್ಯಾ ಜಿ. ಕಾಮತ್ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಭಾಸ್ಕರ್ ಹಾಗೂ ಸ್ವಾತಿ ಭರತ್ ಕಾರ್ಯಕ್ರಮ ನಿರೂಪಿಸಿದರು. ಭವ್ಯಾ ಅಮೀನ್ ಮತ್ತು ಸಂಚಯ್ ವಂದಿಸಿದರು.